ಮುಂಬೈ: ಸೃಜನಾತ್ಮಕ ಸಾಮಾಜಿಕ ಜಾಲತಾಣ ಪೋಸ್ಟ್ಗಳಿಗೆ ಹೆಸರುವಾಸಿಯಾಗಿರೋ ಮುಂಬೈ ಪೊಲೀಸರು ಮತ್ತೊಮ್ಮೆ ಅದ್ಭುತ ಪೋಸ್ಟ್ನಿಂದ ಗಮನ ಸೆಳೆದಿದ್ದಾರೆ. ಈ ಬಾರಿಯ ಪೋಸ್ಟ್ ಸಂದೇಶವಾಗಿರದೇ ಜನತೆಗೆ ಎಚ್ಚರಿಕೆಯನ್ನೂ ಸಹ ನೀಡಿದೆ.
ಬೆಕ್ಕಿನ ಚಿತ್ರದೊಂದಿಗೆ ಟ್ವೀಟ್ ಮಾಡಿರುವ ಮುಂಬೈ ಪೊಲೀಸರು, "ಮಿಯಾಂವ್ ಮಿಯಾಂವ್ ಮಾತ್ರ ಇಲ್ಲಿ ಸ್ವೀಕೃತವಾಗುತ್ತದೆ. ಡ್ರಗ್ಸ್ಗೆ ನೋ ಎನ್ನಿ" ಎಂದು ಕರೆ ನೀಡಿದ್ದಾರೆ.
ಮಿಯಾಂವ್ ಮಿಯಾಂವ್ಗೂ ಬೆಕ್ಕಿಗೂ ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮಲ್ಲಿ ಉಂಟಾಗಬಹುದು, ಅದಕ್ಕೆ ಉತ್ತರ ಮುಂದಿದೆ. ಅಂದಹಾಗೆ ಮಿಯಾಂವ್ ಮಿಯಾಂವ್ (Meow meow) ಸ್ಟ್ರೀಟ್ ಡ್ರಗ್ನ ಹೆಸರು. ಇದರ ವೈಜ್ಞಾನಿಕ ಹೆಸರು ಮೆಫೆಡ್ರೋನ್. ಕೊಕೇನ್ನಷ್ಟೇ ಸ್ಟ್ರೀಟ್ ಡ್ರಗ್ ಸಹ ಹೆಚ್ಚು ಪರಿಣಾಮಕಾರಿಯಾಗಿದೆ. ಸ್ಟ್ರೀಟ್ ಡ್ರಗ್ಗೆ ಇಂಟರ್ನೆಟ್ನಲ್ಲಿ ಭಾರಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ 2007ರಿಂದ ಮಿಯಾಂವ್ ಮಿಯಾಂವ್ ಎಂದು ಕರೆಯಲು ಆರಂಭಿಸಲಾಯಿತು. ಇದನ್ನೂ ಓದಿ: ಆನೆ ತಿಂದಿದ್ದು ಪೈನಾಪಲ್ನಲ್ಲಿ ತುಂಬಿದ್ದ ಸ್ಪೋಟಕವಲ್ಲ: ಓರ್ವ ಆರೋಪಿಯ ಬಂಧನ ಬಳಿಕ ಪ್ರಕರಣಕ್ಕೆ ತಿರುವು!
ಇನ್ನು ಭಾರತದಲ್ಲಿ ಅಕ್ಟೋಬರ್ 2ರ ಗಾಂಧಿ ಜಯಂತಿ ಸಂಭ್ರಮದೊಂದಿಗೆ ರಾಷ್ಟ್ರೀಯ ಮಾದಕ ವಸ್ತು ವ್ಯಸನ ವಿರೋಧಿ ದಿನವನ್ನು ಆಚರಿಸುತ್ತೇವೆ. ಗಾಂಧೀಜಿಯು ಸಹ ಡ್ರಗ್ಸ್ ಅನ್ನು ತೀವ್ರವಾಗಿ ಖಂಡಿಸಿದ್ದರು.
ಮಾದಕ ವಸ್ತುಗಳು ಆರೋಗ್ಯದ ಮೇಲೆ ಅತೀವ ಪರಿಣಾಮವನ್ನು ಬೀರುತ್ತದೆ. ಮೆದುಳು ಸಂಬಂಧಿ ರೋಗಕ್ಕೆ ತುತ್ತಾಗುವುದರಿಂದ ವೃತ್ತಿ, ಕುಟುಂಬ, ಪ್ರೀತಿ ಪಾತ್ರದವರು ಹಾಗೂ ನಾಗರಿಕ ಪ್ರಜ್ಞೆಯನ್ನು ಡ್ರಗ್ಸ್ ಕಸಿದುಕೊಳ್ಳುತ್ತಾರೆ. ಕೆಲವರು ಕುತೂಹಲಕ್ಕಾಗಿ ಅಥವಾ ಫನ್ಗಾಗಿ ಡ್ರಗ್ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಜೀವ ಉಳಿಸುವ ಔಷಧಗಳನ್ನೇ ಡ್ರಗ್ಸ್ ಆಗಿ ತೆಗೆದುಕೊಳ್ಳುತ್ತಾರೆ ಎಂದು ಪರಿಣಿತರು ಹೇಳಿದ್ದಾರೆ. (ಏಜೆನ್ಸೀಸ್) ಇದನ್ನೂ ಓದಿ: VIDEO| ಸಾಗರದಾಳದಲ್ಲಿ ಪತ್ತೆಯಾದ ಪ್ರಮುಖ 10 ನಿಗೂಢ ಪ್ರಾಣಿಗಳಿವು…!