More

    ಆನೆ ತಿಂದಿದ್ದು ಪೈನಾಪಲ್​ನಲ್ಲಿ ತುಂಬಿದ್ದ ಸ್ಪೋಟಕವಲ್ಲ: ಓರ್ವ ಆರೋಪಿಯ ಬಂಧನ ಬಳಿಕ ಪ್ರಕರಣಕ್ಕೆ ತಿರುವು!​

    ತಿರುವನಂತಪುರಂ: ಇಡೀ ದೇಶಾದ್ಯಂತ ಎಲ್ಲರ ಕಂಬನಿಗೆ ಕಾರಣವಾದ ಕೇರಳದ ಗರ್ಭಿಣಿ ಆನೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಈವರೆಗೂ ಪೈನಾಪಲ್​ನಲ್ಲಿ ತುಂಬಿದ್ದ ಸ್ಪೊಟಕ ತಿಂದು ಆನೆ ಸಾವಿಗೀಡಾಗಿದೆ ಎನ್ನಲಾಗಿತ್ತು. ಆದರೆ ಬಂಧನದ ಅಸಲಿ ಸತ್ಯಾಂಶ ಗೊತ್ತಾಗಿದೆ.

    ಬಂಧಿತನನ್ನು ರಬ್ಬರ್​ ತಯಾರಿಕ ವೃತ್ತಿಯ ವಿಲ್ಸನ್ (40)​ ಎಂದು ಗುರುತಿಸಲಾಗಿದ್ದು, ಇನ್ನುಳಿದ ಆರೋಪಿಗಳು ಪರಾರಿ ಆಗಿದ್ದಾರೆಂದು ತಿಳಿದುಬಂದಿದೆ. ಪೊಲೀಸ್​ ಅಧಿಕಾರಿಗಳು ಈಗಾಗಲೇ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಸ್ಪೋಟಕಗಳನ್ನು ತಯಾರಿಸಲು ಮತ್ತೊಬ್ಬರಿಗೆ ನೆರವಾಗುತ್ತಿದ್ದ ಸಂದರ್ಭದಲ್ಲೇ ಆರೋಪಿ ವಿಲ್ಸನ್​ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: VIDEO| ಸಾಗರದಾಳದಲ್ಲಿ ಪತ್ತೆಯಾದ ಪ್ರಮುಖ 10 ನಿಗೂಢ ಪ್ರಾಣಿಗಳಿವು…!

    ಪೊಲೀಸ್​ ಮೂಲಗಳ ಪ್ರಕಾರ ಪೈನಾಪಲ್​ ಬದಲಾಗಿ ತೆಂಗಿನಕಾಯಿಯನ್ನು ಮುರಿದು ಸ್ಪೋಟಕಗಳು ಸೇರಿದಂತೆ ಒಂದು ಭಾಗವನ್ನು ಆನೆ ತಿಂದಿದೆ. ಬಳಿಕ ಸ್ಪೋಟಗೊಂಡಿದ್ದರ ಪರಿಣಾಮ ಆನೆಯ ಬಾಯಿ ಸಂಪೂರ್ಣ ಗಾಯಗೊಂಡಿದೆ. ತಿನ್ನಲು ಹಾಗೂ ಕುಡಿಯಲು ಆಗದೇ ಅತೀವ ನೋವಿನಿಂದ ನರಳಿ ಆನೆ ಪ್ರಾಣಬಿಟ್ಟಿದೆ ಎಂದಿದ್ದಾರೆ.

    ಆನೆಯ ಸ್ಥಿತಿ ನೋಡಿದರೆ, 20 ದಿನಗಳ ಹಿಂದೆಯೇ ಅದು ಗಾಯಗೊಂಡಿದೆ. ಅಂದಿನಿಂದ ಏನೂ ತಿನ್ನಲು ಆಗದೇ ಸಾವಿಗೀಡಾಗಿದೆ ಎಂದು ಆನೆಯ ಬಡಕಲಾದ ಹೊಟ್ಟೆಯನ್ನು ನೋಡಿ ಪೊಲೀಸರು ಅಂದಾಜಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಜನಾಂಗೀಯ ಪ್ರತಿಭಟನೆ ವೇಳೆ ಪ್ರೇಮಿಗಳ ಸರಸ?: ವೈರಲ್​ ಫೋಟೋ ಹಿಂದಿನ ಸತ್ಯಾಂಶವೇ ಬೇರೆ!

    ಸದ್ಯ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

    ಮಾನವೀಯತೆ ಮರೆತು ಗರ್ಭಿಣಿ ಆನೆ ಕೊಂದ ದುಷ್ಟರಿಗೆ ಮುಂದೆ ಕಾದಿದೆ ಮಾರಿಹಬ್ಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts