ನ್ಯೂಸ್

Video| Ludo ಭಾಯ್​ಗೆ ಜನುಮದಿನದ ಶುಭಾಶಯಗಳು... ಶ್ವಾನದ ಬರ್ತ್​​ಡೇಯನ್ನು ಅದ್ದೂರಿಯಾಗಿ ಆಚರಿಸಿದ ಯುವಕರ ಗುಂಪು

ಭೋಪಾಲ್​: ಸಾಮಾನ್ಯವಾಗಿ ನಾವು ನೋಡಿರುವಂತೆ ಮನುಷ್ಯರು ತಮ್ಮ ಜನುಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿರುವುದನ್ನು ಅನೇಕ ಬಾರಿ ಕಂಡಿದ್ದೇವೆ. ಆದರೆ, ಶ್ವಾನಗಳ ಬರ್ತ್​ಡೇಯನ್ನು ಆಚರಿಸಿರುವ ಸುದ್ದಿಯನ್ನು ನಾವು ಅಲ್ಲೊಮ್ಮೆ ಇಲ್ಲೊಮ್ಮೆ ಕೇಳುತ್ತಿರುತ್ತೇವೆ. ಇದೀಗ ಯುವಕರ ಗುಂಪೊಂದು ತಮ್ಮ ಪ್ರೀತಿಯ ಶ್ವಾನದ ಜನುಮದಿನವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ಸದ್ಯ ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ರಸ್ತೆಯ ಇಕ್ಕೆಲಗಳಲ್ಲಿ ಲುಡೋ ಭಾಯ್​ಗೆ (Ludo Bhai) ಜನುಮದಿನದ ಶುಭಾಶುಗಳು ಎಂದು ಹಾಕಿರುವ ಯುವಕರ ಗುಂಪು ಕಾರು ಹಾಗೂ ಬೈಕಿನಲ್ಲಿ ಶ್ವಾನವನ್ನು ನಗರದ ತುಂಬಾ ಸುತ್ತಾಡಿಸಿ ಪಟಾಕಿ ಸಿಡಿಸಿ ಕೇಕ್​ ಕತ್ತಿರಿಸಿ ಸಂಭವ್ರಮಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅನೇಕರು ಯುವಕರ ನಡೆಯನ್ನು ಮೆಚ್ಚಿ ಕಮೆಂಟ್​ ಹಾಕುತ್ತಿದ್ದಾರೆ.

ಮಧ್ಯಪ್ರದೇಶದ ದೆವಾಸ್​ನಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದ್ದು, ಅನೇಕರು ಯುವಕರ ನಡೆಯನ್ನು ಮೆಚ್ಚಿದ್ದಾರೆ. ಈ ವಿಡಿಯೋ 198k ವೀವ್ಸ್ ಪಡೆದುಕೊಂಡಿದ್ದು, ಅನೇಕರು ಬರ್ತ್​ಡೇ ಬಾಯ್​ ಲುಡೋಗೆ (Ludo) ಜನುಮದಿನದ ಶುಭಾಶಯ ಕೋರಿ ಕಮೆಂಟ್​ ಹಾಕುತ್ತಿದ್ದಾರೆ. ಸದ್ಯ ಈ ವಿಡಿಯೋ ಎಲ್ಲರ ಮನ ಗೆಲ್ಲುತ್ತಿದೆ.