ನ್ಯೂಸ್

VIDEO| ಮೆಟ್ರೋದಲ್ಲಿ ಯುವಕರ ಹುಚ್ಚಾಟ; ಕಠಿಣ ಕ್ರಮಕ್ಕೆ ಒತ್ತಾಯಿಸಿದ ನೆಟ್ಟಿಗರು

ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಾವು ಸಾರ್ವಜನಿಕ ಸ್ಥಳ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಅನುಚಿತವಾಗಿ ವರ್ತಿಸುತ್ತಿರುವವರನ್ನು ನಾವು ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ.

ಇದೀಗ ದೆಹಲಿ ಮೆಟ್ರೋದಲ್ಲಿ ಅದೇ ರೀತಿಯ ಘಟನೆಯೊಂದು ನಡೆದಿದ್ದು ನೆಟ್ಟಿಗರನ್ನು ಕೆರಳಿಸಿ ಕಣ್ಣು ಕೆಂಪಾಗಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಹೊರಹಾಕಲಾಗುತ್ತಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಯುವಕರಿಬ್ಬರು ಮೆಟ್ರೋ ರೈಲಿನಲ್ಲಿ ಹುಚ್ಚಾಟ ಮೆರೆಯುತ್ತಿರುವುದು ಕಂಡು ಬರುತ್ತದೆ. ಪಕ್ಕದಲ್ಲೇ ಇರುವ ಸ್ನೇಹಿತರು ಅಪಹಾಸ್ಯ ಮಾಡುತ್ತ ನಗುತ್ತಿರುವುದು ಕಂಡು ಬರುತ್ತದೆ.

ವಿಡಿಯೋದಲ್ಲಿ ಏನಿದೆ?

ಯುವರಿಬ್ಬರು ಮೆಟ್ರೋ ರೈಲಿನ ಬಾಗಿಲ ಬಳಿ ನಿಂತು ಅದನ್ನು ಮುಚ್ಚುವ ಸಮಯಕ್ಕೆ ಆಟೋಮ್ಯಾಟಿಕ್​ ಡೋರ್​ಗೆ ಅಡ್ಡಲಾಗಿ ಕಾಲನ್ನು ಇರಿಸುತ್ತಿರುವುದು ಕಂಡು ಬರುತ್ತದೆ. ಕರೋಲ್​ ಭಾಗ್​ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಯುವಕರ ವಿರುದ್ಧ ಕಠಿಣ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಮೆಟ್ರೋ ನಿಗಮ ರೈಲಿನ ಒಳ ಹಾಗೂ ಹೊರ ಭಾಗ ಬರೆದಿರುವ ಕೋಚ್​ ಸಂಖ್ಯೆಯನ್ನು ಒದಗಿಸುವಂತೆ ಚಿತ್ರಗಳನ್ನು ಪೋಸ್ಟ್​ ಮಾಡಿ ರಿಯಾಕ್ಟ್​ ಮಾಡಿದೆ.