ನ್ಯೂಸ್

ಡಿ ಬಾಸ್​​ ನಟನೆಯ‘ಅರ್ಜುನ್’ ಸಿನಿಮಾ ನಟಿಗೆ 40ನೇ ವಯಸ್ಸಿನಲ್ಲಿ ಮದುವೆ; ವರ ಯಾರು ಗೊತ್ತಾ?

ಬೆಂಗಳೂರು: ನಟ ದರ್ಶನ್‌ ಅಭಿನಯದ ಅರ್ಜುನ್‌ ಸಿನಿಮಾ ನಟಿ ಮೀರಾ ಚೋಪ್ರಾ  ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.  ಮದುವೆಯ ಆಹ್ವಾನ ಪತ್ರಿಕೆ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದ್ದು, 40ನೇ ವರ್ಷದ ನಟಿ ಕೈ ಹಿಡಿಯುತ್ತಿರುವ ವರ ಯಾರು? ಎನ್ನುವ ಮಾಹಿತಿ ಫ್ಯಾನ್ಸ್​​ಗೆ ಸಿಕ್ಕಿದೆ.

ಮೀರಾ ಚೋಪ್ರಾ ಕಳೆದ ಮೂರು ವರ್ಷಗಳಿಂದ ಮುಂಬೈನ ರಕ್ಷಿತ್ ಎಂಬ ಉದ್ಯಮಿಯನ್ನು ಪ್ರೀತಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಪ್ರೀತಿ ಈಗ ದಾಂಪತ್ಯಕ್ಕೆ ತಿರುಗಲಿದೆ. ಆದರೆ ರಕ್ಷಿತ್ ಕೆಜ್ರೀವಾಲ್​ ಫೋಟೋ ಮಾತ್ರ ಎಲ್ಲೂ ನಟಿ ಹಂಚಿಕೊಂಡಿಲ್ಲ.

ಮೀರಾ ಚೋಪ್ರಾ ಮತ್ತು ರಕ್ಷಿತ್ ಜೋಡಿ ಎರಡು ದಿನಗಳ ಕಾಲ ಅದ್ಧೂರಿಯಾಗಿ ವಿವಾಹ ಸಮಾರಂಭ ನಡೆಯಲಿದೆ. ಅವರ ವಿವಾಹ ಸಮಾರಂಭವು ಜೈಪುರದ ಬ್ಯೂನಾ ವಿಸ್ಟಾ ಐಷಾರಾಮಿ ಗಾರ್ಡನ್ ರೆಸಾರ್ಟ್‌ನಲ್ಲಿ ನಡೆಯಲಿದೆ. ಮಾರ್ಚ್ 11 ರಂದು ಬೆಳಗ್ಗೆ ಮೆಹಂದಿ ಕಾರ್ಯಕ್ರಮ ಹಾಗೂ ಸಂಜೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 12 ರಂದು ಬೆಳಿಗ್ಗೆ ಅರಿಶಿಣ ಶಾಸ್ತ್ರ. ಸಂಜೆ ಮದುವೆ, ರಾತ್ರಿ ಆರತಕ್ಷತೆ ನಡೆಯಲಿದೆ. ಕೇವಲ ಕುಟುಂಬ ಸದಸ್ಯರು ಮತ್ತು  ಸಂಬಂಧಿಕರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಮದುವೆಗೆ ಮೀರಾ ಚೋಪ್ರಾ ಸೋದರ ಸಂಬಂಧಿ ಹಾಗೂ ಸ್ಟಾರ್ ಹೀರೋಯಿನ್ ಪ್ರಿಯಾಂಕಾ ಚೋಪ್ರಾ ಆಗಮಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಮೀರಾಚೋಪ್ರಾ ಅವರ ಮದುವೆ ಕಾರ್ಡ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಸಮಾರಂಭದ ನಂತರ ಶೀಘ್ರದಲ್ಲೇ ಮುಂಬೈನಲ್ಲಿ ಬಾಲಿವುಡ್ ಮತ್ತು ಉದ್ಯಮಿಗಳಿಗಾಗಿ ಪ್ರತ್ಯೇಕ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿದಿದೆ.

ಮೀರಾ ಚೋಪ್ರಾ ಮೂಲತಃ ಮುಂಬೈ ಹುಡುಗಿ ಆಗಿದ್ರೂ ಅವರಿಗೆ ಕನ್ನಡಕ್ಕೆ ನಂಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ನಾಯಕಿ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡಿಗರಿಗೆ ಅರ್ಜುನ್ ಚಿತ್ರದ ನಟಿ ಅಂದರೆ ಮೀರಾ ಚೋಪ್ರಾ ನೆನಪಾಗುತ್ತಾರೆ.