More

  ದರ್ಶನ್ ನಟನೆಯ ‘ಅರ್ಜುನ್’ ಚಿತ್ರದ ನಟಿಗೆ ಕೂಡಿ ಬಂತು ಕಂಕಣ ಭಾಗ್ಯ

  ಬೆಂಗಳೂರು: ನಟ ದರ್ಶನ್‌ ಅಭಿನಯದ ಅರ್ಜುನ್‌ ಸಿನಿಮಾದಲ್ಲಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಮೀರಾ ಚೋಪ್ರಾ ಎಂಟ್ರಿಕೊಟ್ಟಿದ್ದರು. ಮೀರಾ ಚೋಪ್ರಾ ಮುದುವೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

  ಮೀರಾಗೆ ಇದೇ ಮಾರ್ಚ್ 11 ಮತ್ತು 12ರಂದು ಮದುವೆ ಸಮಾರಂಭ ನಡೆಯಲಿದೆ. ಜೈಪುರ ಮತ್ತು ದೆಹಲಿ ಹೆದ್ದಾರಿ ಬಳಿಯಿರುವ ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ಮೀರಾ ಮದುವೆ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆ ಕೂಡ ನಡೆಯುತ್ತಿದೆ.  ನಟಿ ಮೀರಾ ಚೋಪ್ರಾ ಅವರ ಎರಡು ದಿನಗಳ ವಿವಾಹ ಮಹೋತ್ಸವದಲ್ಲಿ ಸುಮಾರು 150 ಅತಿಥಿಗಳು ಭಾಗವಹಿಸಲಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ನಡೆಯಲಿದೆ.

  ಮೀರಾ ಮದುವೆ ಆಗುತ್ತಿರುವ ವರನ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ಉದ್ಯಮಿಯ ಜೊತೆ ಮೀರಾ ಮದುವೆ ಎಂಬ ಸುದ್ದಿ ಹರಿದಾಡುತ್ತಿದೆ. ಮದುವೆ ದಿನ ರಿವೀಲ್ ಆಗಲಿರುವ ಫೋಟೋದಲ್ಲಿ ತಿಳಿಯಲಿದೆ.

  ಮೀರಾ ಚೋಪ್ರಾ ಮೂಲತಃ ಮುಂಬೈ ಹುಡುಗಿ ಆಗಿದ್ರೂ ಅವರಿಗೆ ಕನ್ನಡಕ್ಕೆ ನಂಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ನಾಯಕಿ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡಿಗರಿಗೆ ಅರ್ಜುನ್ ಚಿತ್ರದ ನಟಿ ಅಂದರೆ ಅವರು ಎಂಬುದು ನೆನಪಾಗುತ್ತಾರೆ.

  ‘1920 ಲಂಡನ್’, ‘ಸೆಕ್ಷನ್ 375’, ‘ಕಾಮಾತಿಪುರ’ ಎಂಬ ಹಿಂದಿ ಸಿನಿಮಾಗಳಲ್ಲಿ ಮೀರಾ ಚೋಪ್ರಾ ನಟಿಸಿದ್ದಾರೆ. ‘ಸಫೇದ್’ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ.

  ಎದೆಯ ಮೇಲೆ ದರ್ಶನ್ ಫೋಟೋ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts