ಸಾಂದರ್ಭಿಕ ಚಿತ್ರ 
ನ್ಯೂಸ್

ನೋಡು ನೋಡುತ್ತಿದ್ದಂತೆಯೇ ನಡುರಸ್ತೆಯಲ್ಲಿ ನರ್ಸ್​ಗೆ ಇರಿದ ದುಷ್ಕರ್ಮಿ

ಪಾಟ್ನಾ: ಹಾಡಹಗಲೇ ನರ್ಸ್​ವೊಬ್ಬಳನ್ನು ಎಲ್ಲರ ಮುಂದೆಯೇ ಭೀಕರವಾಗಿ ಹತ್ಯೆಗೈದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಇದನ್ನೂ ಓದಿ: ಹೆಲ್ಮೆಟ್​ ಧರಿಸಿ ಹಗಲು ಹೊತ್ತಿನಲ್ಲಿ ಬ್ಯಾಂಕ್ ಲೂಟಿ ಮಾಡಿದ ಶಸ್ತ್ರಸಜ್ಜಿತ ದರೋಡೆಕೋರರು

ಮೃತಳನ್ನು ಪೂರ್ಣಿಯಾ ನಿವಾಸಿ ಸೋನಿ ಕುಮಾರಿ (25) ಎಂದು ಗುರುತಿಸಲಾಗಿದ್ದು, ಈಕೆ ಪಾಟ್ನಾದ ಮೇದಾಂತ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ನರ್ಸ್ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದಾಳಿ ನಡೆಸಿರುವ ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ಆಕೆ ಮುಂದೆ ನಿಂತಿದ್ದು, ಏನಾಗುತ್ತಿದೆ ಎಂದು ಅರ್ಥವಾಗುವ ಮೊದಲೇ ದುಷ್ಕರ್ಮಿಗಳು ಚಾಕು ತೆಗೆದುಕೊಂಡು ಹಲ್ಲೆ ನಡೆಸಿದ್ದಾರೆ.

ಪರಿಣಾಮವಾಗಿ ನರ್ಸ್ ನೆಲದ ಮೇಲೆ ಬಿದ್ದಿದ್ದು, ಘಟನೆಯ ನಂತರ ಈ ಪ್ರದೇಶದಲ್ಲಿ ಸಂಚಲನ ಉಂಟಾಯಿತು. ಕೂಡಲೇ ಸುತ್ತಲೂ ನೆರೆದಿದ್ದ ಜನರ ಗುಂಪು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಇತ್ತ, ಘಟನೆ ವರದಿಯಾದ ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕಂಕರಬಾಗ್ ಪೊಲೀಸ್ ಠಾಣೆಯ ಪ್ರಭಾರಿ ರವಿಶಂಕರ್ ಮಾತನಾಡಿ, ಈ ವಿಷಯವು ಪರಸ್ಪರ ವಿವಾದದಂತೆ ಕಾಣುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಕುಟುಂಬ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.(ಏಜೆನ್ಸೀಸ್​)