ನ್ಯೂಸ್

ಸೆ.15ರಿಂದ ನಡೆಯಬೇಕಿದ್ದ ಎಂಬಿಬಿಎಸ್​ ಪರೀಕ್ಷೆ ಮುಂದೂಡಿಕೆ

arunakunigal

ಬೆಂಗಳೂರು: ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್​ಜಿಯುಎಚ್​ಎಸ್​) ಎಂಬಿಬಿಎಸ್​ ಪರೀಕ್ಷೆಗಳನ್ನು ಮುಂದೂಡಿದೆ.

ವೇಳಾಪಟ್ಟಿ ಪ್ರಕಾರ ಸೆ.15ರಿಂದ ಎಂಬಿಬಿಎಸ್​ ಪರೀಕ್ಷೆ ನಡೆಯಬೇಕಿತ್ತು. ಆದರೆ, ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಅ.13ಕ್ಕೆ ನಡೆಸಲು ನಿರ್ಧರಿಸಿದೆ. ಇದನ್ನೂ ಓದಿರಿ ಕ್ರೀಡಾ ಪ್ರಶಸ್ತಿಗೆ ರಾಜೀವ್ ಗಾಂಧಿ ಹೆಸರೇಕೆ? ಬದಲಾಯಿಸಿ ಎಂದ ಕುಸ್ತಿಪಟು ಬಬಿತಾ ಪೋಗಟ್

ಮುಂದಿನ 15 ದಿನಗಳು ವಿದ್ಯಾರ್ಥಿಗಳಿಗೆ ಆನ್​ಲೈನ್​ ಮೂಲಕ ತರಗತಿಗಳನ್ನು ನಡೆಸುವಂತೆ ಎಲ್ಲ ಸಂಯೋಜಿತ ಕಾಲೇಜುಗಳಿಗೆ ತಿಳಿಸಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಮೌಲ್ಯಮಾಪನ ಕುಲಸಚಿವ ಡಾ.ಕೆ.ಬಿ.ಲಿಂಗೇಗೌಡ ತಿಳಿಸಿದ್ದಾರೆ.