ಬೆಂಗಳೂರು: ತುಮಕೂರು ಬ್ರದರ್ ಇಂಡಸ್ಟ್ರೀಸ್ ಘಟಕ ವರ್ಷಾಂತ್ಯಕ್ಕೆ ಕಾರ್ಯಚಟುವಟಿಕೆ ಆರಂಭವಾಗಲಿದೆ ಎಂದಿರುವ ಬೃಹತ್ ಮತ್ತು ಮಧ್ಯುಮ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್, ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಉಪಕರಣಗಳು ಸೇರಿದಂತೆ ಹಲವು ಉತ್ಪನ್ನಗಳಿಗೆ ವಿಶ್ವ ವಿಖ್ಯಾತಗಳಿಸಿರುವ ಬ್ರದರ್ ಇಂಡಸ್ಟ್ರೀಸ್ ಕಂಪೆನಿಗೆ ಈದಿನ ಭೇಟಿ ನೀಡಿ, ಅಧ್ಯಕ್ಷರಾದ ಇಚಿರೋ ಸಸಾಕಿ ಮತ್ತು ಹಿರಿಯ ವ್ಯವಸ್ಥಾಪಕರಾದ ಮಕೋಟೊ ಹೋಶಿ ಹಾಗೂ ಅವರ ತಂಡದೊಂದಿಗೆ ಮಾತುಕತೆ ನಡೆಸಿದೆ.
ಇದನ್ನೂ ಓದಿ: ಆರ್ಡರ್ ಮಾಡಿ 6 ವರ್ಷ ಕಳೆದಮೇಲೆ ಫ್ಲಿಪ್ಕಾರ್ಟ್ ಕರೆ: ‘ನೀವು ಯಾವ ಸಮಸ್ಯೆ ಎದುರಿಸುತ್ತಿದ್ದೀರಿ?’ ಎಂದು ಗ್ರಾಹಕನಿಗೆ ಪ್ರಶ್ನೆ!
"ತುಮಕೂರು ಸಮೀಪದ ಜಪಾನ್ ಕೈಗಾರಿಕಾ ಟೌನ್ ಶಿಪ್ನಲ್ಲಿ ಬ್ರದರ್ ಕಂಪೆನಿ ವರ್ಷಾಂತ್ಯಕ್ಕೆ ತಮ್ಮ ಕಾರ್ಯಚಟುವಟಿಕೆ ಆರಂಭಿಸುವುದಾಗಿ ತಿಳಿಸಿದರು. ಯಂತ್ರೋಪಕರಣಗಳ ವಲಯದಲ್ಲಿ ಮತ್ತಷ್ಟು ವಿಸ್ತರಣೆಯ ಅವಕಾಶಗಳನ್ನು ಅನ್ವೇಷಿಸಲು ಅವರು ಸಿದ್ಧರಿದ್ದಾರೆ. R&D ಮತ್ತು ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆಯ ಉದ್ದೇಶವನ್ನು ಸಹ ಕಂಪೆನಿ ಹೊಂದಿದೆ. ಇದರಿಂದಾಗಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಹೇರಳ ಅವಕಾಶಗಳು ಲಭ್ಯವಾಗಲಿದೆ" ಎಂದು ಹೇಳಿದ್ದಾರೆ.