ನ್ಯೂಸ್

'ನಿಮ್ಮೆಲ್ಲ ವಿಘ್ನಗಳು ದೂರವಾಗಲಿ...' ಭಾರತೀಯರಿಗೆ ಗಣೇಶ ಚೌತಿ ಶುಭಾಶಯ ಕೋರಿದ ಜೋ ಬಿಡೆನ್​

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ, ಸದ್ಯ ಟ್ರಂಪ್​ಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಜೋ ಬಿಡೆನ್​ ಅವರು ಇಂದು ಭಾರತೀಯರಿಗೆ ಗಣೇಶ ಚತುರ್ಥಿಯ ಶುಭಾಶಯ ಕೋರಿದ್ದಾರೆ.

ಯುಎಸ್​​ನಲ್ಲಿದ್ದು ಹಬ್ಬ ಆಚರಣೆ ಮಾಡುತ್ತಿರುವ ಭಾರತೀಯರಿಗೆ, ಭಾರತದಲ್ಲಿ ಆಚರಣೆ ಮಾಡುತ್ತಿರುವವರಿಗೆ ಹಾಗೂ ಜಗತ್ತಿನೆಲ್ಲೆಡೆ ಗಣೇಶನ ಹಬ್ಬ ಆಚರಿಸುತ್ತಿರುವ ಭಾರತೀಯರಿಗೆ ಜೋ ಅವರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ಭಾರತ, ಯುಎಸ್​ ಹಾಗೂ ಜಗತ್ತಿನಾದ್ಯಂತ ಹಿಂದು ಹಬ್ಬ ಗಣೇಶ ಚೌತಿ ಆಚರಿಸುತ್ತಿರುವ ಎಲ್ಲರಿಗೂ ಶುಭಾಶಯಗಳು. ಈ ಹಬ್ಬ ನಿಮ್ಮೆಲ್ಲರಿಗೂ ಹೊಸ ಪ್ರಾರಂಭವಾಗಲಿ. ನಿಮಗೆ ಎದುರಾಗಿರುವ ವಿಘ್ನಗಳೆಲ್ಲ ದೂರವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

77ವರ್ಷದ ಜೋ ಬಿಡೆನ್ ಅವರು ಡೆಮೊಕ್ರಟಿಕ್​ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿದ್ದಾರೆ. (ಏಜೆನ್ಸೀಸ್​)