ನ್ಯೂಸ್

ಪಾಕಿಸ್ತಾನಕ್ಕೆ ಸಮುದ್ರದಲ್ಲಿ ಸಿಕ್ಕಿದೆ ಆ 'ನಿಧಿ'! 5ವರ್ಷದಲ್ಲಿ ಅರಬ್​ ನಂತೆ ಶ್ರೀಮಂತ ದೇಶವಾಗುವುದೇ?

ಇಸ್ಲಾಮಾಬಾದ್​: ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದ ಕಡಲ ತೀರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಬೃಹತ್​ ಸಂಗ್ರಹ ಪತ್ತೆಯಾಗಿದೆ.

ಪಾಕಿಸ್ತಾನವು ಭೂವೈಜ್ಞಾನಿಕ ಸಮೀಕ್ಷೆಯ ಮೂಲಕ ಸಂಗ್ರಹ ಸ್ಥಳವನ್ನು ಗುರುತಿಸಲಾಗಿದೆ ಎಂದು ಪತ್ತೆಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಇಲಾಖೆಗಳು ಸರ್ಕಾರಕ್ಕೆ ತಿಳಿಸಿವೆ. ಆದರೆ, ಈಗಲೇ ಈ ಸಂಗ್ರಹವನ್ನು ಬಳಸಿಕೊಳ್ಳುವುದು ಸುಲಭವಲ್ಲ, ತೈಲ ಹೊರ ತೆಗೆಯುವ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಹಲವು ವರ್ಷ ಬೇಕಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ನೈಸರ್ಗಿಕ ಅನಿಲದ ಸಂಗ್ರಹವು ಎಷ್ಟು ಅಗಾಧವಾಗಿದೆ ಎಂದರೆ ದೇಶದ ಭವಿಷ್ಯವನ್ನು ಬದಲಾಯಿಸಬಹುದು. ಇದು ಪಾಕ್​ ಮಿತ್ರ ರಾಷ್ಟ್ರದ ಸಹಯೋಗದೊಂದಿಗೆ ಮೂರು ವರ್ಷ ನಡೆಸಿದ ಪ್ರಯತ್ನದ ಫಲಯಾಗಿ ಗೋಚರವಾಗಿದೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ದೇಶದ ಇಂಧನ ಅಗತ್ಯತೆ ಪೂರೈಸಲು ಈ ನಿಕ್ಷೇಪಗಳು ಸಾಕಾಗುತ್ತವೆಯೇ ಎಂಬ ಪ್ರಶ್ನೆಗೆ, ಇದನ್ನು ಹೊರತೆಗೆಯಲು 5 ಬಿಲಿಯನ್ ಅಮೆರಿಕಾ ಡಾಲರ್ ಹೂಡಿಕೆ ಅಗತ್ಯವಿದೆ. ಸರ್ಕಾರ ಇತ್ತ ಗಮನಹರಿಸಿದರೂ ಸಂಗ್ರಹ ಹೊರತೆಗೆಯಲು ಐದು ವರ್ಷ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.