ನ್ಯೂಸ್

ಮೆಕ್ಸಿಕೋದ ಸೂಪರ್ ಮಾರ್ಕೆಟ್​ವೊಂದರಲ್ಲಿ ಭಾರಿ ಸ್ಫೋಟ: ಮಕ್ಕಳು ಸೇರಿ ಕನಿಷ್ಠ 23 ಸಾವು, 11 ಮಂದಿಗೆ ಗಾಯ| Explosion

ಮೆಕ್ಸಿಕೋ: ಉತ್ತರ ಮೆಕ್ಸಿಕೋದಲ್ಲಿ ಶನಿವಾರ ಸಂಜೆ(ನ. 01) ಸೂಪರ್ ಮಾರ್ಕೆಟ್​ನಲ್ಲಿ ಭಾರಿ ಸ್ಫೋಟ(Explosion) ಸಂಭವಿಸಿದ್ದು, ಘಟನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿ ಕನಿಷ್ಠ 23 ಜನ ಮೃತಪಟ್ಟಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಮಾತನಾಡಿರುವ ಸೊನೊರಾ ರಾಜ್ಯದ ಗವರ್ನರ್ ಅಲ್ಫೊನ್ಸೊ ಡುರಾಜೊ, ನಗರದ ಮಧ್ಯಭಾಗದಲ್ಲಿರುವ ವಾಲ್ಡೋ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದೆ. ದುಃಖಕರವೆಂದರೆ ನಾವು ನೋಡಿದಂತೆ ಮೃತಪಟ್ಟವರಲ್ಲಿ ಹಲವರು ಮಕ್ಕಳಿದ್ದಾರೆ. ಬದುಕುಳಿದವರಿಗೆ ಸ್ಫೋಟ ಸಂಭವಿಸಿದ ಹರ್ಮೊಸಿಲ್ಲೊ ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಕಾರಣ ತಿಳಿಯಲು ಮತ್ತು ಹೊಣೆಗಾರರನ್ನು ಕಂಡು ಹಿಡಿಯಲು ತನಿಖೆಗೆ ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.

ಘಟನೆಯೂ ನಾಗರಿಕರ ವಿರುದ್ಧ ಭಯೋತ್ಪಾದಕರ ದಾಳಿಯೇ, ಹಿಂಸಾತ್ಮಕ ಕೃತ್ಯವೇ ಎಂಬುದನ್ನು ಸಾರ್ವಜನಿಕ ಭದ್ರತಾ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. (ಏಜೆನ್ಸೀಸ್)