ನ್ಯೂಸ್

ಬಹುನಿರೀಕ್ಷಿತ 'ದೇವರ' ಸಿನಿಮಾಗೆ ಖ್ಯಾತ ನಟಿಯ ಎಂಟ್ರಿ! ಅತಿಥಿ ಪಾತ್ರವೋ? ನಾಯಕಿಯೋ? ಇಲ್ಲಿದೆ ಅಸಲಿ ಸಂಗತಿ

ಆಂಧ್ರಪ್ರದೇಶ: ಟಾಲಿವುಡ್​ನ ನಟ ಜೂ.ಎನ್​ಟಿಆರ್​ ಅಭಿನಯದ ಬಹುನಿರೀಕ್ಷಿತ, ಪ್ಯಾನ್ ಇಂಡಿಯಾ ದೇವರ ಸಿನಿಮಾ ಬಗ್ಗೆ ಸದ್ಯ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದ್ದು, ಚಿತ್ರದ ಬಿಡುಗಡೆಗೆ ತೀವ್ರ ಕಾತರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಸಿನಿಮಾದ ಬಹುಮುಖ್ಯ ಭಾಗದ ಚಿತ್ರೀಕರಣಗಳು ಭರದಿಂದ ಸಾಗುತ್ತಿದ್ದು, ಚಿತ್ರದಲ್ಲಿ ವಿಎಫ್ಎಕ್ಸ್​ ಕೆಲಸಗಳು ಹೆಚ್ಚು ಸದ್ದು ಮಾಡಲಿದೆ ಎಂದು ಹೇಳಲಾಗುತ್ತಿದೆ.

ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬಂದ ದೇವರದಲ್ಲಿ ಎನ್​ಟಿಆರ್​ಗೆ ನಾಯಕಿಯಾಗಿ ಬಾಲಿವುಡ್​ನ ಬೆಡಗಿ ಜಾನ್ವಿ ಕಪೂರ್​ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಶೇಷವಾಗಿ ಎನ್​ಟಿಆರ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದು, ತಂದೆ ಮತ್ತು ಮಗನಾಗಿ ತೆರೆ ಮೇಲೆ ಮೋಡಿ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇದೆಲ್ಲದರ ನಡುವೆ ಹೊಸ ಸುದ್ದಿಯೊಂದು ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದ್ದು, ಜೂ.ಎನ್​ಟಿಆರ್ ಚಿತ್ರಕ್ಕೆ ಮರಾಠಿ ಭಾಷೆಯ ಹೆಸರಾಂತ ನಟಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ.

ದೇವರ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಮರಾಠಿ ನಟಿ ಶ್ರುತಿ ಮರಾಠೆ, ಈ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಕೇವಲ ದೇವರ ಮಾತ್ರವಲ್ಲದೇ ಮರಾಠಿ, ಹಿಂದಿ ಮತ್ತು ಕೆಲವು ತಮಿಳು ಚಿತ್ರಗಳ ಭಾಗವಾಗಿದ್ದಾರೆ ಎನ್ನಲಾಗಿದೆ.

ನಟ ಸೈಫ್​ ಅಲಿ ಖಾನ್​ ಗಾಯಗೊಂಡ ಬಳಿಕ ಚಿತ್ರದ ಚಿತ್ರೀಕರಣ ವಿಳಂಬಗೊಂಡಿತು. ಇದೀಗ ವಿಳಂಬದ ಕಾರಣ ಸಿನಿಮಾದ ರಿಲೀಸ್​ ಡೇಟ್​ ಕೂಡ ಮುಂದೂಡಲ್ಪಟ್ಟಿದೆ. ಚಿತ್ರವನ್ನು ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್ ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್ ಅವರ ಸಂಗೀತ ಸಂಯೋಜಯಿದೆ,(ಏಜೆನ್ಸೀಸ್).