ನಟ ಮಿಥುನ್ ಚಕ್ರವರ್ತಿ ಆಸ್ಪತ್ರೆಗೆ ದಾಖಲು! 'ಯಾರು ಈ ವದಂತಿಗಳನ್ನು ಹರಡುತ್ತಿರುವುದು?' ಎಂದ ಕುಟುಂಬಸ್ಥರು

Untitled design (51)
Published on

ಕೋಲ್ಕತ್ತಾ: ಇಂದು ಬೆಳಗ್ಗೆ ಕೋಲ್ಕತ್ತಾದಲ್ಲಿ ಎದೆನೋವಿನಿಂದ ಬಳಲುತ್ತಿದ್ದ ಹಿರಿಯ ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ ಎಂದು ಸುದ್ದಿಯಾದ ಕೆಲವೇ ಗಂಟೆಗಳ ಬೆನ್ನಲ್ಲೇ ಚಕ್ರವರ್ತಿ ಅವರ ಸೊಸೆ ಮದಾಲ್ಸಾ ಶರ್ಮಾ ಇದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ.

"ದಿನನಿತ್ಯದ ತಪಾಸಣೆಗೆ ಅವರನ್ನು ನಾವು ಆಸ್ಪತ್ರೆಗೆ ಕರೆದುಕೊಂಡು ಬರುತ್ತೇವೆ. ಇದನ್ನು ತಪ್ಪಾಗಿ ಭಾವಿಸಿ, ತಿರುಚಿ ಹೇಳುವಂತದ್ದು ಏಕೆ? ಅವರು ಆರೋಗ್ಯವಾಗಿಯೇ ಇದ್ದಾರೆ, ಚೆನ್ನಾಗಿದ್ದಾರೆ. ಇದು ಕೇವಲ ಒಂದು ತಪಾಸಣೆ, ಈ ವದಂತಿಗಳನ್ನು ಯಾರು ಹರಡುತ್ತಿದ್ದಾರೆ?" ಎಂದು ಮದಾಲ್ಸಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ವಿರುದ್ಧ ಕಿಡಿಕಾರಿದರು.

ವರದಿಯ ಪ್ರಕಾರ, ಮದಾಲ್ಸಾ ಅವರು ಆಸ್ಪತ್ರೆಗೆ ದಾಖಲಾದ ವರದಿಗಳನ್ನು ತಳ್ಳಿಹಾಕಿದರು. ಸೊಸೆಯ ಬಳಿಕ ಮಿಥುನ್​ ಅವರ ಹಿರಿಯ ಪುತ್ರ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ತಂದೆ 100% ಚೆನ್ನಾಗಿದ್ದಾರೆ ಮತ್ತು ಇದು ಅವರ ಎಂದಿನ ತಪಾಸಣೆಯಾಗಿದೆ" ಎಂದು ಹೇಳುವ ಮುಖೇನ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net