More

    ಹಲ್ದ್ವಾನಿ ಹಿಂಸಾಚಾರ: ಐವರ ಬಂಧನ, 5,000 ಮಂದಿ ವಿರುದ್ಧ ಪ್ರಕರಣ ದಾಖಲು!

    ಉತ್ತರಾಖಂಡ: ಗುರುವಾರ (ಫೆ.08) ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಐವರನ್ನು ಬಂಧಿಸಿದ್ದು, ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸದ್ಯ ಇಲ್ಲಿಯವರೆಗೆ ಐವರ ಸಾವನ್ನು ದೃಢಪಡಿಸಿರುವುದಾಗಿ ತಿಳಿಸಿದ್ದಾರೆ. ತನಿಖೆ ಮುಂದುವರೆದಂತೆ, ರಾಜ್ಯ ಸರ್ಕಾರವು ಪ್ರಕರಣದ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ವರ್ತೂರು ಸಂತೋಷ್​​ಗೆ ಸನ್ಮಾನ ಮಾಡಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್​ಗೆ ವರ್ಗಾವಣೆ ಶಿಕ್ಷೆ

    “ಪೊಲೀಸರು 5,000 ಅಪರಿಚಿತ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ” ಎಂದು ಹಲ್ದ್ವಾನಿ, ಎಸ್ಎಸ್ಪಿ ನೈನಿತಾಲ್ ಪಿ.ಎನ್. ಮೀನಾ ತಿಳಿಸಿದ್ದಾರೆ. ಅಕ್ರಮವಾಗಿ ನಿರ್ಮಿಸಿದ್ದ ಮದರಸಾವನ್ನು ಕೆಡವುವ ವಿಚಾರವಾಗಿ ನಡೆದ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದಾರೆ. ಸ್ಥಳೀಯರು ಪುರಸಭೆಯ ಕಾರ್ಮಿಕರು ಮತ್ತು ಪೊಲೀಸರ ಮೇಲೆ ಕಲ್ಲು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಎಸೆದ ಪರಿಣಾಮ 100ಕ್ಕೂ ಹೆಚ್ಚು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದರು.

    ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಾತ್ರ ಚೆನ್ನಾಗಿ​​ ಇಂಗ್ಲಿಷ್​ ಮಾತಾಡ್ತೀರಾ? ಸಂಶೋಧನೆಯಲ್ಲಿ ತಿಳಿದು ಬಂತು ಅಚ್ಚರಿಯ ಸತ್ಯ

    ಪ್ರಸ್ತುತ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ಎ.ಪಿ. ಅಂಶುಮನ್, “ದಾಖಲಾದ ಮೂರು ಎಫ್‌ಐಆರ್‌ಗಳಲ್ಲಿ 16 ಜನರನ್ನು ಹೆಸರಿಸಲಾಗಿದೆ. ಅದರಲ್ಲಿ ಸದ್ಯ ಐವರನ್ನು ಬಂಧಿಸಲಾಗಿದೆ. ಹಿಂಸಾಚಾರ ಸಂಭವಿಸಿದ ಬನ್‌ಭೂಲ್‌ಪುರ ಮತ್ತು ಹತ್ತಿರದ ಸ್ಥಳಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಕರ್ಫ್ಯೂ ಅನ್ನು ತೆಗೆದುಹಾಕಲಾಗಿದೆ. ತನಿಖೆ ನಡೆಯುತ್ತಿರುವುದರಿಂದ ಬಂಭೂಲ್‌ಪುರ ಪ್ರದೇಶದಲ್ಲಿ ಯಾವುದೇ ಸಂದರ್ಶಕರಿಗೂ ಅನುಮತಿಯಿಲ್ಲ” ಎಂದು ಒತ್ತಿ ಹೇಳಿದ್ದಾರೆ,(ಏಜೆನ್ಸೀಸ್).

    ‘ಓಂ’ ಚಿತ್ರದಲ್ಲಿರುವ ಈ ಇಬ್ಬರು ಮಕ್ಕಳು ಈಗ ಹೇಗಿದ್ದಾರೆ ಗೊತ್ತಾ? ಸ್ಟಾರ್​ ನಟನ ಮಕ್ಕಳಿವರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts