More

    ವರ್ತೂರು ಸಂತೋಷ್​​ಗೆ ಸನ್ಮಾನ ಮಾಡಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್​ಗೆ ವರ್ಗಾವಣೆ ಶಿಕ್ಷೆ

    ಬೆಂಗಳೂರು: ಬಿಗ್‌ ಬಾಸ್ ರಿಯಾಲಿಟಿ ಶೋ ಫೈನಲ್ ಕಂಟೆಸ್ಟೆಂಟ್ ಆಗಿದ್ದ ವರ್ತೂರ್​ ಸಂತೋಷ್​ ಅವರನ್ನು ಪೊಲೀಸ್‌ ಸಮವಸ್ತ್ರದಲ್ಲಿ ಸನ್ಮಾನಿಸಿದ್ದಕ್ಕೆ ಸಬ್‌ ಇನ್ಸ್‌ಪೆಕ್ಟರ್ ಅನ್ನು ವರ್ಗಾವಣೆ ಮಾಡಲಾಗಿದೆ.

    ಬಿಗ್‌ಬಾಸ್‌ ಫೈನಲಿಸ್ಟ್ ವರ್ತೂರು ಸಂತೋಷ್ ಅವರಿಗೆ ಸಮವಸ್ತ್ರದಲ್ಲಿ ಪಿಎಸ್‌ಐ ತಿಮ್ಮರಾಯಪ್ಪ ಸನ್ಮಾನ‌ ಮಾಡಿದ್ದರು. ಆದ್ದರಿಂದ ಬೆಂಗಳೂರು ನಗರ ಪೊಲೀಸ್ ಕಮೀಷನರ್ ದಯಾನಂದ್ ಅವರು ಸಬ್ ಇನ್ಸಪೇಕ್ಟರ್ ಪಿ.ಎಸ್.ಐ ತಿಮ್ಮರಾಯಪ್ಪನನ್ನು ರಾತ್ರೋ ರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

    ಬಿಗ್ ಬಾಸ್ ಸ್ಪರ್ಧೆಯಲ್ಲಿ ಉತ್ತಮ ಆಟವಾಡಿದ್ದ ವರ್ತೂರು ಸಂತೋಷ್ ಅವರು ಕೋಟ್ಯಂತರ ಅಭಿಮಾನಿಗಳನ್ನು ಘಲಿಸಿದ್ದರು. ಆದರೆ,. ವರ್ತೂರು ಸಂತೋಷ್‌ ಅವರು ಬಿಗ್‌ಬಾಸ್‌ ಮನೆಯಿಂದ ಹೊರಗೆ ಬಂದಾಗ ಅವರಿಗೆ ಸನ್ಮಾನಿಸಿದ್ದ ಪಿಎಸ್‌ಐ ಪೊಲೀಸ್ ಇಲಾಖೆ ಕೆಂಗಣ್ಣಿಗೆ ಗುರಿಯಾಗಿದ್ದರು.

    ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಪ್ರಕರಣದ ಆರೋಪಿಯೂ ಆಗಿರುವ ವರ್ತೂರು ಸಂತೋಷ್‌ಗೆ ಪೊಲೀಸ್ ಸಮವಸ್ತ್ರದಲ್ಲಿ ಸನ್ಮಾನಿಸಿದ್ದಕ್ಕೆ ಪಿಎಸ್‌ಐ ತಿಮ್ಮರಾಯಪ್ಪ ಅವರನ್ನು ವರ್ತೂರು ಪೊಲೀಸ್‌ ಠಾಣೆಯಿಂದ ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

    ಮನರಂಜನೆಗೆ ಎಲ್ಲರೂ ದಾಸರೇ ಆಗಿದ್ದಾರೆ. ಯಾವುದೇ ವೃತ್ತಿ, ಉದ್ಯೋಗವಿದ್ದರೂ ಸಿನಿಮಾ, ಹಾಡು, ಧಾರಾವಾಹಿ ಹಾಗೂ ಟಿವಿಯಲ್ಲಿ ಪ್ರಸಾರವಾಗುವ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವುದಕ್ಕೆ ಮಾತ್ರ ಯಾವುದೇ ನಿರ್ಬಂಧವಿಲ್ಲ. ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಪ್ರಕರಣದ ಆರೋಪಿಯೂ ಆಗಿರುವ ವರ್ತೂರು ಸಂತೋಷ್‌ಗೆ ಪೊಲೀಸ್ ಸಮವಸ್ತ್ರದಲ್ಲಿ ಸನ್ಮಾನಿಸಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

    ಗುರುಕಿರಣ್ ಪತ್ನಿ ಪಲ್ಲವಿ ಶೆಟ್ಟಿಗೂ ನಟ ಸುನೀಲ್​ಗೂ ಇದೆ ಈ ಒಂದು ಸಂಬಂಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts