ನ್ಯೂಸ್

ಕೃಷಿ ಪ್ರಶಸ್ತಿಗೆ ‘ಮಣ್ಣಿನ ಗೆಳತಿ’ ಪುಸ್ತಕ ಆಯ್ಕೆ

ಬೆಂಗಳೂರು: ಪತ್ರಕರ್ತೆ ಭಾರತಿ ಹೆಗಡೆ ಅವರ ‘ಮಣ್ಣಿನ ಗೆಳತಿ’ ಪುಸ್ತಕ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಪ್ರಶಸ್ತಿ ಗೆ ಆಯ್ಕೆಯಾಗಿದೆ. ಕೃಷಿ ವಿಶ್ವವಿದ್ಯಾಲಯದ 55ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಅಕ್ಟೋಬರ್ 3ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೃಷಿ ವಿವಿ ತಿಳಿಸಿದೆ.

ಈ ಕೃತಿ ಕೃಷಿಯಲ್ಲಿ ತೊಡಗಿದ 38 ಮಹಿಳೆಯರ ಅನುಭವದ ಕಥನವಾಗಿದೆ. ಮೈಸೂರು ವಿಶ್ವವಿದ್ಯಾಲಯದ ಫೆಲೋಶಿಪ್​ಗಾಗಿ ಬರೆದ ಈ ಕೃತಿ ನಂತರ ಮಹಿಳೆಯರ ಮತ್ತಷ್ಟು ಅಭಿಪ್ರಾಯ ಹಾಗೂ ಅನುಭವ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ವಿಕಾಸ ಪ್ರಕಾಶನ ಪ್ರಕಟಿಸಿದೆ.