ನ್ಯೂಸ್

ದೆಹಲಿ ಸ್ಫೋಟದಲ್ಲಿ ಮಡಿದವರಿಗೆ ಭಾವನಾತ್ಮಕ ಪೋಸ್ಟ್​ ಮೂಲಕ ಸಂತಾಪ ಸೂಚಿಸಿದ ಮಿಸ್ ಯೂನಿವರ್ಸ್ My Heart Is Heavy

ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಸ್ಪೋಟದಲ್ಲಿ ಮಡಿದವರಿಗೆ, 74 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಣಿಕಾ ವಿಶ್ವಕರ್ಮ, ತಮ್ಮ ಇನ್ಸ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಂತಾಪ (My Heart Is Heavy)  ಸೂಚಿಸಿದ್ದಾರೆ.

ಮಾತಿನ ಕೊರತೆ ಮತ್ತು ಹೃದಯವಿದ್ರಾವಕ ಎಂಬ ಶೀರ್ಷಿಕೆಯೊಂದಿಗೆ ತನ್ನ ಟಿಪ್ಪಣಿಯನ್ನು ಹಂಚಿಕೊಂಡ ಮಣಿಕಾ, ಘಟನೆಯಲ್ಲಿ ದುರ್ಮರಣ ಹೊಂದಿದವರಿಗೆ ದುಃಖವನ್ನು ವ್ಯಕ್ತಪಡಿಸಿದರು. ಹಾಗೆಯೇ ಕುಟುಂಬ ಸದಸ್ಯರನ್ನು ಕಳೆದುಕೊಂಡವರ ನೆನೆದು ಬೇಸರ ವ್ಯಕ್ತಪಡಿಸಿದರು.

ನನ್ನ ಹೃದಯ ಭಾರವಾಗಿದೆ: ಮಣಿಕಾ ವಿಶ್ವಕರ್ಮ

ನನ್ನ ಪ್ರೀತಿಯ ಭಾರತೀಯರೇ, ಇತ್ತೀಚೆಗೆ ನಡೆದ ಸ್ಪೋಟದಿಂದ ನನ್ನ ಹೃದಯ ಛಿಧ್ರವಾಗಿದೆ. ನನ್ನ ಆತ್ಮವೂ ದುಃಖಿಸುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಬಾಂಬ್ ಸ್ಫೋಟದ ನಂತರ ದೇಶಾದ್ಯಂತ ಆಘಾತವನ್ನು ಹುಟ್ಟುಹಾಕಿದೆ. ಈ ಅಪಘಾತದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗಾಗಿ ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.

ಈ ಘಟನೆಯಲ್ಲಿ ಗಾಯಗೊಂಡವರು ಶೀಘ್ರದಲ್ಲಿಯೇ ಚೇತರಿಸಿಕೊಳ್ಳಲಿ. ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಪ್ರತಿಯೊಬ್ಬರಿಗೂ ಗಾಯವನ್ನು ಶಮನಗೊಳಿಸಲು ಹೇಳಲು ಯಾವುದೇ ಪದಗಳಿಲ್ಲ. ಈ ಕತ್ತಲೆಯಿಂದ ಹೊರ ಬರುವ ಶಕ್ತಿಯನ್ನು ಆ ದೇವರು ನಿಮಗೆ ನೀಡಲಿ ಎಂದು ಬರೆದಿದ್ದಾರೆ.

ಭಾರತದ ಮಗಳಾಗಿ ಸದಾ ನಿಮ್ಮೊಂದಿಗೆ ನಿಲ್ಲುತ್ತೇನೆ

ಮಿಸ್ ಯೂನಿವರ್ಸ್ ಇಂಡಿಯಾ" ಪಾತ್ರದ ಬಗ್ಗೆ ಸೌಂದರ್ಯ ರಾಣಿ ಚಿಂತಿಸುತ್ತಾ, ಕಿರೀಟವು ಗ್ಲಾಮರ್ ಮೀರಿದ ಕರ್ತವ್ಯದೊಂದಿಗೆ ಬರುತ್ತದೆ. ಹಾಗೆಯೇ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಧರಿಸುವುದು ಒಂದು ಆಳವಾದ ಜವಾಬ್ದಾರಿ. ಇದು ಏಕತೆ, ಶಾಂತಿ ಮತ್ತು ಸಹಾನುಭೂತಿಗಾಗಿ ಮಾತನಾಡುವ ಒಂದು ವೇದಿಕೆಯಾಗಿದೆ.

ದುರಂತದ ನಂತರ ತೋರಿದ ಸ್ಥಿತಿಸ್ಥಾಪಕತ್ವ ಮತ್ತು ಧೈರ್ಯಕ್ಕೆ ಮಣಿಕಾ ಗೌರವ ಸಲ್ಲಿಸಿದ್ದು, ಭಯೋತ್ಪಾದನೆಯ ಮುಂದೆ, ಕೋಪ ಮತ್ತು ಭಯವನ್ನು ಅನುಭವಿಸುವುದು ಸಹಜ. ಆದರೆ, ದೆಹಲಿಯ ಚಿತ್ರಗಳನ್ನು ನೋಡಿದಾಗ ಅಪರಿಚಿತರಿಗೆ ಬೇರೇ ಯಾರೋ ಅಪರಿಚಿತರು ಸಹಾಯ ಮಾಡುವುದು ಇದು ಜನರ ನಿಸ್ವಾರ್ಥವನ್ನು ತೋರುತ್ತದೆ ಎಂದರು.

ಕಳೆದುಕೊಂಡ ಜೀವಗಳನ್ನು ಎಲ್ಲರೂ ಗೌರವಿಸಬೇಕು. ನಾವು ವಿಭಜನೆಯನ್ನು ಹೊಂದುವ ಬದಲು ಒಗ್ಗಟ್ಟನ್ನು ಮತ್ತು ಹತಾಶೆ ಭರವಸೆಗಳನ್ನು ಆರಿಸಿಕೊಳ್ಳಬೇಕು. ಇದರ ಮೂಲಕ ಕಳೆದುಕೊಂಡ ಜೀವಗಳನ್ನು ಗೌರವಿಸೋಣ. ನಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲರೂ ಒಗ್ಗಟ್ಟಾಗಿ ನಿಲ್ಲೋಣ. ನನ್ನ ಆಳವಾದ ಸಂತಾಪಗಳು, ನನ್ನ ಅಚಲ ಬೆಂಬಲ ಮತ್ತು ಶಾಂತಿಯುತ ಭವಿಷ್ಯಕ್ಕಾಗಿ ನಿಲ್ಲುವ ಭರವಸೆ ಎಂದು ಬರೆದಿದ್ದಾರೆ.

ದೆಹಲಿ ಸ್ಫೋಟದ ಹಿನ್ನಲೆ

ಭಾನುವಾರ (ನ.09) ಸಂಜೆ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಮೆಟ್ರೋ ಸ್ಟೇಶನ್‌ನ 1 ನೇ ಗೇಟ್​ ಬಳಿ ಭಯಾನಕ ಸ್ಪೋಟ ಸಂಭವಿಸಿದ್ದು, ಈ ಘಟನೆಲ್ಲಿ ಸುಮಾರು 13 ಜನ ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನು ಸ್ಫೋಟದಿಂದಾಗಿ ಸುತ್ತಮುತ್ತಲಿನ 6 ಕ್ಕೂ ಹೆಚ್ಚು ವಾಹನಗಳು, ಆಟೋ ರಿಕ್ಷಾಗಳು ದಹನಗೊಂಡಿದ್ದಾವೆ ಎಂದು ವರದಿಯಾಗಿದೆ.

ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದ್ದು, ಅನ್‌ಲಾಫುಲ್ ಅಕ್ಟಿವಿಟೀಸ್ (ಪ್ರಿವೆನ್ಷನ್) ಆಕ್ಟ್ (ಯುಎಪಿಎ), ಎಕ್ಸ್‌ಪ್ಲೋಸಿವ್ಸ್ ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಫರೀದಾಬಾದ್‌ನಲ್ಲಿ 350 ಕೆಜಿ ಸ್ಫೋಟಕಗಳು, ಆಯುಧಗಳು ಸೀಜ್​ ಆಗಿದ್ದು, ಫೋರೆನ್ಸಿಕ್ ತಂಡಗಳು ತನಿಖೆ ನಡೆಸುತ್ತಿವೆ ಎಂದು ವರದಿಯಾಗಿದೆ. (ಏಜೆನ್ಸೀಸ್​)