ನ್ಯೂಸ್

VEDIO | ಮುಂಗುಸಿ ಹಾಗೂ ನಾಗರಹಾವು ಸೆಣೆಸಾಡುವ ಈ ವಿಡಿಯೋ ನೋಡಿದರೆ ಜೀವ ಝಲ್​ ಅನ್ನುತ್ತದೆ

kumarvrl

ಹಾವು ಹಾಗೂ ಮುಂಗುಸಿ ಬದ್ಧ ವೈರಿಗಳು. ನಾಗರ ಹಾವು ಕಂಡರೆ ಮುಂಗುಸಿ ಕ್ಷಣದಲ್ಲಿ ದಾಳಿ ನಡೆಸುತ್ತದೆ.

ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿ ಸುಸಂತಾನಂದ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಮುಂಗುಸಿ ಹಾವಿನ ಮೇಲೆ ದಾಳಿ ನಡೆಸುವ ವಿಡಿಯೋ ತುಣುಕನ್ನು ಅಪ್​ಲೋಡ್​ ಮಾಡಿದ್ದಾರೆ.

ಈ ವಿಡಿಯೋದಲ್ಲಿ ವಿಷಪೂರಿತ ನಾಗರಹಾವು ಮುಂಗುಸಿಯನ್ನು ಕಚ್ಚಿದರು ಅಪಾಯ ಏಕೆ ಉಂಟಾಗುವುದಿಲ್ಲ ಎಂಬುದನ್ನು ಬರೆದುಕೊಂಡಿದ್ದಾರೆ.

ಮುಂಗುಸಿ ಹಾವಿನೊಂದಿಗೆ ಲಕ್ಷಾಂತರ ವರ್ಷಗಳಿಂದ ಸೆಣೆಸಾಡುತ್ತಾ ಅದರ ವಿಷವನ್ನು ಅರಗಿಸಿಕೊಳ್ಳುವ ದೈಹಿಕ ರಚನೆ ಹೊಂದಿದೆ. ಮುಂಗುಸಿ ಅತೀ ಚುರುಕು ಸಸ್ತನಿ. ದಪ್ಪವಾದ ಕೋರೆ ಹಲ್ಲುಗಳನ್ನು ಹೊಂದಿದೆ. ಅಲ್ಲದೆ ಹಾವಿನ ವಿಷ ಮುಂಗುಸಿಯ ದೇಹ ಸೇರಿದಾಗ ಮುಂಗುಸಿ ದೇಹದಲ್ಲಿ ಗ್ಲೈಕೊಪ್ರೊಟೀನ್ ಉತ್ಪಾದನೆಯಾಗುವುದರಿಂದ ವಿಷಕ್ಕೆ ಪ್ರತಿ ವಿಷವಾಗುತ್ತದೆ. ಹೀಗಾಗಿ ಮುಂಗುಸಿಗೆ ಅಪಾಯ ಎದುರಾಗುವುದಿಲ್ಲ.

ಮುಂಗುಸಿಗಳು ಬಹಳ ಚುರುಕು ಹಾಗೂ ಕುಶಾಗ್ರಬುದ್ಧಿಯುಳ್ಳ ಪ್ರಾಣಿಗಳು. ದಪ್ಪವಾದ ತುಪ್ಪಳ ಹೊಂದಿರುವುದರಿಂದ ಹಾವುಗಳನ್ನು ಸುಲಭವಾಗಿ ಕೊಲ್ಲುತ್ತವೆ ಎಂಬ ಮಾಹಿತಿ ಇದೆ.