ನ್ಯೂಸ್

ಅನಾರೋಗ್ಯ ರಜೆ ಕೇಳಿದ ಉದ್ಯೋಗಿಗೆ ಅವಮಾನಿಸಿದ ಮ್ಯಾನೇಜರ್​! ಪೋಸ್ಟ್​ ವೈರಲ್​ Sick Leave

ನವದೆಹಲಿ: ಇತ್ತೀಚಿನ ದಿನಗಳಲ್ಲಿ ರಜೆಗಾಗಿ ಉದ್ಯೋಗಿ Sick Leave ಹಾಗೂ ಶಾಖಾ ವ್ಯವಸ್ಥಾಪಕರ ನಡುವೆ ನಡೆಯುವ ವಾದ ವಿವಾದ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇಲ್ಲೊಂದು ಕಂಪನಿಯಲ್ಲಿ ಅನಾರೋಗ್ಯ ಪೀಡಿತ ಉದ್ಯೋಗಿ ಮತ್ತು ಕರುಣೆಯಿಲ್ಲದ ಶಾಖಾ ವ್ಯವಸ್ಥಾಪಕರ ನಡುವಿನ ಗೊಂದಲವು ಸಂವಾದವನ್ನು ಸೃಷ್ಟಿಸಿದ್ದು, ಕಾರ್ಮಿಕರು ತಮ್ಮ ಕಾನೂನುಬದ್ಧ ಆರೋಗ್ಯ ಸಮಸ್ಯೆಗಳನ್ನು ಹೊಂದಿದಾಗ ಅವರು ಅನುಭವಿಸುವ ಮಾನಸಿಕ ಹೊರೆಯನ್ನು ಬೆಳಕಿಗೆ ತರುವ ಪೋಸ್ಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೈರಲ್​ ಆದ ಪೋಸ್ಟ್ನಲ್ಲೇನಿದೆ?

ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಯೊಬ್ಬ ತನ್ನ ಬಾಸ್​​ಗೆ ಮೂಲವ್ಯಾಧಿ ಸಮಸ್ಯೆಯಿಂದ ತೀವ್ರ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದೇನೆ. ನನಗೆ ದೀರ್ಘವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ದಯವಿಟ್ಟು ನನಗೆ ಇಂದು ವೈದ್ಯಕೀಯ ರಜೆ ನೀಡಿ ಎಂದು ವೈದ್ಯರ ಟಿಪ್ಪಣಿ ಪ್ರಿಸ್ಕ್ರಷನ್​ ಜೊತೆಗೆ ರಜೆಯನ್ನು ಕೇಳಿದ್ದಾರೆ.

ಈ ಸಂದೇಶಕ್ಕೆ ಮ್ಯಾನೇಜರ್​ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದೆ ಇರುವುದರಿಂದ ಮತ್ತೊಮ್ಮೆ ನನಗೆ ಬರಲು ಸಾಧ್ಯವಿಲ್ಲ ಮನವಿ ಮಾಡಿದ್ದಾರೆ. ಈ ಸಂದೇಶಕ್ಕೆ ಕೋಪಗೊಂಡ ಮ್ಯಾನೇಜರ್​ ನಿನಗೆ ಶಿಸ್ತು ಹೇಳಿಕೊಟ್ಟವರು ಯಾರು? ನೀನು ರಜೆ ಕೇಳುತ್ತಿರುವ ಸಮಯ ನೋಡು, ನಿಮ್ಮ 2 ದಿನಗಳ ಸಂಬಳವನ್ನು ಕಡಿತಗೊಳಿಸಲಾಗುತ್ತದೆ ಎಂದು ಮರು ಸಂದೇಶವನ್ನು ಕಳುಹಿಸಿದ್ದಾರೆ.

ಈ ವೇಳೆ ಕೆಲಸಗಾರ ಕ್ಷಮೆಯಾಚಿಸಿ,"ದಯವಿಟ್ಟು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ ಸರ್, ನಾನು ವೈದ್ಯಕೀಯ ಕಾರಣಗಳಿಗಾಗಿ ಕೇಳುತ್ತಿದ್ದೇನೆ... ನನ್ನ ಆರೋಗ್ಯ ಸಮಸ್ಯೆಗಳಿಂದಾಗಿ ನಾನು ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ನಿಮಗೆ ತಿಳಿಸುತ್ತಿದ್ದೇನೆ ಎಂದು ಬೇಡಿಕೊಂಡಿದ್ದಾರೆ.

ಆದರೂ ಮ್ಯಾನೇಜರ್ ಗದರಿಸುತ್ತಲೇ ಇದ್ದು, ನಿನ್ನ ವ್ಯವಹಾರ ಯಾರು ಮಾಡುತ್ತಾರೆ? ನೀನು ನಿನ್ನ ಜವಾಬ್ದಾರಿ ಮತ್ತು ಬದ್ಧತೆಯಿಂದ ಓಡಿಹೋದಷ್ಟೂ ಸಮಸ್ಯೆ ಹೆಚ್ಚಾಗುತ್ತದೆ. ಮೊದಲ 10 ದಿನಗಳಲ್ಲಿ ನೀನು ನಿನ್ನ ಬದ್ಧತೆಗೆ ಬದ್ಧನಾಗಿ ನಿಲ್ಲಲಿಲ್ಲ ಎಂದು ಹೇಳಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಏನು?

ಈ ಸಂಭಾಷಣೆಯು ಶೀಘ್ರದಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹೊರಹೊಮ್ಮಿದ್ದು, ಮ್ಯಾನೇಜರ್​ನ ವೃತ್ತಿಪರತೆ ಮತ್ತು ಸಹಾನುಭೂತಿ ಕೊರತೆಯನ್ನು ನೆಟ್ಟಿಗರು ಖಂಡಿಸಿದ್ದಾರೆ. ಇನ್ನು ಕೆಲವು ಬಳಕೆದಾರರು ಮ್ಯಾನೇಜರ್​ನ ಇಂಗ್ಲಿಷ್​ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದು, ಮೊದಲು ಅವನನ್ನು ಇಂಗ್ಲೀಷ್​ ತರಗತಿಗೆ ಕಳುಹಿಸಿ ನಂತರ ಮಾನವೀಯತೆ ತರಗತಿಗೆ ಕಳುಹಿಸಿ ಎಂದು ಬರೆದಿದ್ದಾರೆ. (ಏಜೆನ್ಸೀಸ್​)