ಪಟನಾ: 18 ವರ್ಷದ ಯುವಕನ ಮರ್ಮಾಂಗ ಮತ್ತು ಕುತ್ತಿಗೆ ಕೊಯ್ದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಿಹಾರದ ಸೀತಮಾರ್ಹಿ ಜಿಲ್ಲೆಯಲ್ಲಿ ನಡೆದಿದೆ. ಕೊಲೆ ಮಾಡಿ, ಯುವಕನ ದೇಹವನ್ನು ಆಣೆಕಟ್ಟಿನ ಮೇಲ್ಭಾಗದಲ್ಲಿ ಎಸೆದು ಹೋಗಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ: ಯಡಿಯೂರಪ್ಪ ಹುಚ್ಚಾಸ್ಪತ್ರೆಯಲ್ಲಿ ಇರಬೇಕಿತ್ತು ಆದರೆ ವಿಧಾನಸೌಧವನ್ನೇ ಹುಚ್ಚಾಸ್ಪತ್ರೆ ಮಾಡಿಕೊಂಡಿದ್ದಾರೆ ಎಂದ ವಾಟಾಳ್!
ಜಫರ್ಪುರ ಗ್ರಾಮದಲ್ಲಿ ಇಂತದ್ದೊಂದು ಘಟನೆ ವರದಿಯಾಗಿದೆ. ಶನಿವಾರದಂದು ಯುವಕ ಗ್ರಾಮದಲ್ಲಿ ನಡೆದಿದ ಕ್ರಿಕೆಟ್ ಮ್ಯಾಚ್ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ. ಅದರ ಮರುದಿನವೇ ಆತನ ಕೊಲೆಯಾಗಿದೆ. ಯುವಕನ ಕುತ್ತಿಗೆ ಮತ್ತು ಮರ್ಮಾಂಗವನ್ನು ಕತ್ತರಿಸಿ ಕೊಲೆ ಮಾಡಲಾಗಿದೆ. ಯಾರು ಈ ದುಷ್ಕೃತ್ಯವೆಸಗಿದ್ದಾರೆ ಎನ್ನುವುದಕ್ಕೆ ಯಾವುದೇ ಸುಳಿವಿಲ್ಲ ಎನ್ನಲಾಗಿದೆ.
ಗ್ರಾಮಸ್ಥರ ಒತ್ತಾಯದ ಮೇರೆಗೆ ಪೊಲೀಸ್ ನಾಯಿಯ ತಂಡವನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಗಿದೆ. ಆದರೆ ನದಿಯೊಂದರ ಬಳಿ ಹೋಗಿ ನಾಯಿಗಳು ನಿಂತಿವೆ. ಪ್ರಕರಣದಲ್ಲಿ ಮೂವರ ವಿರುದ್ಧ ಶಂಕೆ ವ್ಯಕ್ತವಾಗಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಯುವಕ ಮೃತದೇಹವನ್ನು ಮರಣೋತ್ತ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ತನಿಖೆಯನ್ನು ಚುರುಕುಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)