ಮುಂಬೈ: ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಮಾಡಿದ ವರ್ಕೌಟ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಸಾಮಾನ್ಯವಾಗಿ ಅನೇಕರು ಹೆಚ್ಚಾಗಿ ಕಡಿಮೆ ಜನಸಂದಣಿ ಇರುವ ವಾತಾವರಣದಲ್ಲಿ ವ್ಯಾಯಾಮ ಮಾಡಲು ಬಯಸುತ್ತಾರೆ. ಬೆಳಗಿನ ಸಮಯದಲ್ಲಿ ಜಿಮ್ ವರ್ಕೌಟ್ ಮಾಡುವುದರಿಂದ ಮನಸ್ಸಿಗೆ ಉಲ್ಲಾಸ ಮತ್ತು ದೇಹಕ್ಕೂ ಲಾಭಕಾರಿ ಎಂಬ ಯೋಚನೆ ಇಂದಿಗೂ ಹಲವರಲ್ಲಿದೆ.
ವ್ಯಕ್ತಿಯೊಬ್ಬರು ಬೆಳಗ್ಗೆ 6 ಗಂಟೆಗೆ ರೈಲ್ವೆ ನಿಲ್ದಾಣದ ಕೊನೆಯಲ್ಲಿ ಶಾಂತವಾಗಿ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಯನ್ನು ರೈಲಿನೊಳಗಿದ್ದ ಪ್ರಯಾಣಿಕರೊಬ್ಬರು ದೂರದಿಂದಲೇ ಗಮನಿಸಿದ್ದು, ವರ್ಕೌಟ್ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ ಮಾಡಿ, ವಿಡಿಯೋ ವೀಕ್ಷಿಸಿದ್ದಾರೆ.
'thecomicalchingu.' ಎಂಬ ಹೆಸರಿನ ಪ್ರಯಾಣಿಕ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ತಮ್ಮ ದಿನನಿತ್ಯದ ಕೆಲಸಗಳನ್ನು ಮುಗಿಸಿಕೊಳ್ಳುವಷ್ಟರಲ್ಲಿ ದಿನವೇ ಅಂತ್ಯವಾಯಿತು ಎನ್ನುವ ಈ ಕಾಲದಲ್ಲಿ ಬೆಳಂಬೆಳಗ್ಗೆ ವ್ಯಕ್ತಿಯೊಬ್ಬರು ಶಿಸ್ತಿನಿಂದ ವ್ಯಾಯಾಮ ಮಾಡುತ್ತಿರುವ ದೃಶ್ಯ ಇದೀಗ ನೆಟ್ಟಿಗರ ಗಮನವನ್ನು ಸೆಳೆದಿದೆ,(ಏಜೆನ್ಸೀಸ್).