ನ್ಯೂಸ್

ಸಂಗೀತ ಸ್ಪರ್ಧೆಗೆ ಹಾಡುವ ಹಕ್ಕಿಗಳನ್ನು ಕಳ್ಳಸಾಗಾಣೆ ಮಾಡಲು ಹೋಗಿ ಸಿಕ್ಕಿಬಿದ್ದ!

ನ್ಯೂಯಾರ್ಕ್​: ಸುಶ್ರಾವ್ಯವಾದ ದ್ವನಿ ಹೊರಡಿಸುವ ಪಿಂಚಸ್​ ಹಕ್ಕಿಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬನನ್ನು ನ್ಯೂಯಾರ್ಕ್ ಅಂತಾರಾಷ್ಟ್ರೀಯ​​ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸ್ಯಾಮುಯಲ್ ಎಂಬಾತ ತನ್ನ ಜಾಕೆಟ್​​ನಲ್ಲಿ ಹಾಗೂ ಆ್ಯಂಕಲ್​ಗಳಲ್ಲಿ ಚಿಕ್ಕ ಚಿಕ್ಕ ಡಬ್ಬಿಗಳನ್ನು ಮಾಡಿ 34 ಜೀವಂತ ಪಿಂಚಸ್​ ಹಕ್ಕಿಗಳನ್ನು ತೆಗೆದುಕೊಂಡು ಗಯಾನಾಕ್ಕೆ ಹೋಗುವಾಗ ಪೊಲೀಸ್ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.

ಗಯಾನಾದಲ್ಲಿ ಪಿಂಚಸ್​ ಹಕ್ಕಿಗಳಿಂದ ಸಂಗೀತ ಕಾರ್ಯಕ್ರಮದ ಸ್ಪರ್ಧೆಗಾಗಿ ಈ ಪಕ್ಷಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗಿ ಆರೋಪಿತ ಹೇಳಿದ್ದಾನೆ. ಈತನಿಗೆ ಗಯಾನದಿಂದ 3000 ಡಾಲರ್​ ಹಣವನ್ನು ಆಮೀಷ ಒಡ್ಡಲಾಗಿತ್ತು ಎಂದು ತಿಳಿದು ಬಂದಿದೆ.

ಅಳಿವಿನಂಚಿನಲ್ಲಿರುವ ಪಿಂಚಸ್​ ಹಕ್ಕಿಗಳನ್ನು ಅಮೆರಿಕದಲ್ಲಿ ಸಾಕುವುದಕ್ಕೆ ಹಾಗೂ ಮಾರುವುದಕ್ಕೆ ಅವಕಾಶ ಇಲ್ಲ. ಈ ಹಕ್ಕಿಗಳು ಸುಶ್ರಾವ್ಯವಾದ ದ್ವನಿ ಹೊರಡಿಸುತ್ತವೆ. ಕೆಲವರು ಇವುಗಳನ್ನು ಬಳಸಿಕೊಂಡು ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾರೆ. United Nations Office on Drugs and Crime (UNODC) ಪ್ರಕಾರ ಜಗತ್ತಿನಾದ್ಯಂತ 2019 ರಲ್ಲಿ 20767 ವನ್ಯಜೀವಿಗಳನ್ನು ಕಳ್ಳಸಾಗಾಣಿಕೆ ಹಾಗೂ ಮುಂತಾದ ಕಾರಣಗಳಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.