More

    ವಿಮಾನದ ಎಂಜಿನ್​ಗೆ ನಾಣ್ಯಗಳನ್ನು ಎಸೆದ ಪ್ರಯಾಣಿಕ: ತಪ್ಪಿದ ದುರಂತ, ಕಾರಣ ಕೇಳಿ ಪೊಲೀಸರೇ ಕಕ್ಕಾಬಿಕ್ಕಿ!

    ಬೀಜಿಂಗ್​: ವಿಮಾನ ಪ್ರಯಾಣವೆಂದರೆ ಬಹುತೇಕರಿಗೆ ಭಯವಾಗುತ್ತದೆ. ಅದರಲ್ಲೂ ಮೊದಲ ಬಾರಿಗೆ ಪ್ರಯಾಣಿಸುವವರ ಎದೆ ಢವಢವ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಹಗುರವಾದ ವಿಮಾನ ಒಳಗೆ ಕುಳಿತು ಪ್ರಯಾಣಿಸುವಾಗ ಯಾವ ಸಮಯದಲ್ಲಿ ಏನಾಗುತ್ತದೆ ಎಂಬ ಭಯ ಕಾಡುತ್ತಲೇ ಇರುತ್ತದೆ.

    ಪ್ರಯಾಣದ ವೇಳೆ ಕೆಲವೊಂದು ಹವ್ಯಾಸ ಅಥವಾ ಪದ್ಧತಿ ಅದೃಷ್ಟ ತಂದುಕೊಡುತ್ತದೆ ಎಂದು ಕೆಲ ಪ್ರಯಾಣಿಕರು ನಂಬಿರುತ್ತಾರೆ. ಕೆಲವರ ಮೌಢ್ಯಕ್ಕೆ ಇನ್ನಿತರರು ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಕನಿಷ್ಠ ಜ್ಞಾನವು ಇರುವುದಿಲ್ಲ. ಇದೇ ರೀತಿಯ ಘಟನೆಯೊಂದು ಚೀನಾದ ಶಾನ್​ಡಾಂಗ್​ ಪ್ರಾಂತ್ಯದಲ್ಲಿ ನಡೆದಿದೆ.

    ಪ್ರಯಾಣ ಸುಖಕರವಾಗಿರುತ್ತದೆ ಎಂಬ ನಂಬಿಕೆಯಿಂದ ಪ್ರಯಾಣಿಕನೊಬ್ಬ ವಿಮಾನದ ಎಂಜಿನ್​ಗೆ ನಾಣ್ಯಗಳನ್ನು ಎಸೆದ ಪರಿಣಾಮ ವಿಮಾನ ಪ್ರಯಾಣವೇ ರದ್ದಾದ ಪ್ರಸಂಗ ಜರುಗಿತು. ಅದೃಷ್ಟವಶಾತ್​ ಯಾವ ಪ್ರಯಾಣಿಕರಿಗೂ ತೊಂದರೆ ಆಗಲಿಲ್ಲ. ಪ್ರಯಾಣಿಕ ವಿಮಾನದ ಪ್ರೊಪೆಲ್ಲರ್​ಗಳಿಗೆ ನಾಣ್ಯಗಳನ್ನು ಎಸೆದಿದ್ದ. ಅದಕ್ಕೆ ಕಾರಣ ತನಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ.

    ಚೀನಾದ ವೈಫ್ಯಾಂಗ್​ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವ್ಯಾಂಗ್​ ಎಂಬ ಪ್ರಯಾಣಿಕನಿಂದ ಈ ಕೃತ್ಯ ನಡೆದಿದೆ. ಕೈತುಂಬಾ ಹಿಡಿದಿದ್ದ ನಾಣ್ಯಗಳನ್ನು ವ್ಯಾಂಗ್​ ವಿಮಾನದ ಎಂಜಿನ್​ಗೆ ಎಸೆದಿದ್ದ. ಟೇಕ್​ ಆಫ್​ಗೂ ಮುನ್ನ ಕಾರ್ಮಿಕರು ಎಂಜಿನ್​ ಕೆಳಗೆ ನಾಣ್ಯಗಳಿದಿದ್ದನ್ನು ನೋಡಿ ಎಚ್ಚರಿಸಿದ್ದರಿಂದ ಆಗಬಹುದಾದ ದೊಡ್ಡ ಅನಾಹುತ ತಪ್ಪಿದೆ.

    ಸುಮಾರು ಆರು ನಾಣ್ಯಗಳನ್ನು ವ್ಯಾಂಗ್​ ಎಸೆದಿದ್ದ. ಎಲ್ಲ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ವಿಮಾನ ಪ್ರಯಾಣವನ್ನೇ ರದ್ದು ಮಾಡಲಾಯಿತು. ಮರುದಿನ ಮತ್ತೊಂದು ವಿಮಾನದ ಸೌಲಭ್ಯ ಮಾಡಿಕೊಡಲಾಯಿತು. ವ್ಯಾಂಗ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶಾಕಿಂಗ್​ ಸಂಗತಿ ಹೊರಬಂದಿದೆ. ಈತ ನಾಣ್ಯಗಳನ್ನು ಎಸೆದಿದ್ದು ಇದೇ ಮೊದಲೇನಲ್ಲ ಇದಕ್ಕೂ ಮುನ್ನು ಈ ರೀತಿ ಮಾಡಿದ್ದಾನೆಂಬ ಮಾಹಿತಿ ತಿಳಿದುಬಂದಿದೆ. (ಏಜೆನ್ಸೀಸ್​)

    ಅಸ್ಸಾಂನಲ್ಲಿ 6.4ರಷ್ಟು ತೀವ್ರತೆಯ ಭೂಕಂಪನ: ಕುಸಿದು ಬಿದ್ದ ಕಟ್ಟಡಗಳು

    ಪ್ರಖ್ಯಾತ ಆ್ಯಂಕರ್​ ಪತಿಗ್ಯಾಕೆ ಬಂತು ಈ ದುರ್ಬುದ್ಧಿ? ನಂಬಿದ ಮಹಿಳೆಗೆ ಈ ರೀತಿ ಮಾಡಿದ್ದು ಸರಿನಾ?

    ಕೇರಳದಲ್ಲಿ ಆಕ್ಸಿಜನ್​ ಕೊರತೆಯಾಕಿಲ್ಲ? ನಿಜಕ್ಕೂ ಇತರೆ ರಾಜ್ಯಗಳಿಗಿದು ಮಾದರಿ, ಇಲ್ಲಿದೆ ಅಚ್ಚರಿಯ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts