ನ್ಯೂಸ್

ಪತಿ ವಿರುದ್ಧ ದೂರು ದಾಖಲಿಸಿದ ಪತ್ನಿ; ಕೋರ್ಟ್​​ ಆವರಣದಲ್ಲೇ ಆಕೆ ಮುಖಕ್ಕೆ ಆ್ಯಸಿಡ್ ಎರಚಿದ!

ತಮಿಳುನಾಡು: ಪತ್ನಿಯ ಮುಖದ ಮೇಲೆ ಪತಿಯೊಬ್ಬ ಕೋರ್ಟಿನ ಆವರಣದಲ್ಲೇ ಆ್ಯಸಿಡ್ ಎರಚಿರುವ ಘಟನೆ ತಮಿಳುನಾಡಿನ ಕೊಯಮತ್ತೂರುನಲ್ಲಿ ಇಂದು ನಡೆದಿದೆ.

ಚಿತ್ರಾ ಸಂತ್ರಸ್ತೆ, ಶಿವಕುಮಾರ್ ಆ್ಯಸಿಡ್ ಎರಚಿದ ಆರೋಪಿ. ಮಹಿಳೆ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ತನ್ನ ಪತಿಯ ಮೇಲೆ ದೂರು ದಾಖಲಿಸಿದ್ದು, ಈ ಪ್ರಕರಣದ ವಿಚಾರಣೆಗೆ ಕೋರ್ಟ್ ಬಂದ ಬಂದಿರುವ ವೇಳೆ ಆ್ಯಸಿಡ್ ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ.

ಪತ್ನಿ ತನ್ನ ವಿರುದ್ದ ದೂರು ದಾಖಲು ಮಾಡಿದ್ದಾಳೆ. ಇದರ ವಿಚಾರಣೆಗೆ ಬಂದ ಪತಿ ಶಿವಕುಮಾರ್ ನೀರಿನ ಬಾಟಲಿಯಲ್ಲಿ ಆಯಸಿಡ್‌ ತುಂಬಿಸಿಕೊಂಡು ಕೋರ್ಟಿನ ಆವರಣಕ್ಕೆ ತಂದಿದ್ದಾನೆ. ಇನ್ನೇನು ವಿಚಾರಣೆ ಆರಂಭಗೊಳ್ಳಬೇಕು ಅಷ್ಟು ಹೊತ್ತಿಗೆ ಶಿವಕುಮಾರ್‌ ಪತ್ನಿ ಚಿತ್ರ ಮುಖದ ಮೇಲೆ ಆ್ಯಸಿಡ್ ಎರಚಿದ್ದಾನೆ.

ಕೂಡಲೇ ಅಲ್ಲಿದ್ದ ಜನರು ಆರೋಪಿ ಶಿವಕುಮಾರ್‌ ನನ್ನು ಹಿಡಿದು ಥಳಿಸಲು ಯತ್ನಿಸಿದ್ದಾರೆ. ಈ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತೇವೆಂದು ಪೊಲೀಸ್​​ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.