ತೆಲಂಗಾಣ: ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ವ್ಯಕ್ತಿಯೊಬ್ಬ ಮರದ ಮೇಲೆ ಹತ್ತಿ ಕುಳಿತು, ಸಹಾಯಕ್ಕಾಗಿ ಪರದಾಡುತ್ತಿರುವ ದೃಶ್ಯ ಇದೀಗ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಬರೆದುಕೊಟ್ಟ ಸ್ಕ್ರಿಪ್ಟ್ ಓದುತ್ತಿದ್ದಾರೆ: ಹಿಂದೂ ಜಾಗರಣ ವೇದಿಕೆ ಸದಸ್ಯ
ವ್ಯಕ್ತಿಯೊಬ್ಬ ಪ್ರವಾಹಕ್ಕೆ ಸಿಲುಕಿ, ಮರದ ಮೇಲೆ ಹತ್ತಿ ಕುಳಿತು, ಸಹಾಯ ಕೋರಿದ್ದಾರೆ. ಸ್ಥಳೀಯರು ಸೀರೆಗಳನ್ನು ಗಂಟು ಬಿಗಿದು, ಹಗ್ಗದ ರೂಪದಲ್ಲಿ ಬಳಸಿ ವ್ಯಕ್ತಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ತೆಲಂಗಾಣದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ವೆಂಕಟಾಪುರ ಮಂಡಲದ ಲಕ್ಷ್ಮೀದೇವಿಪೇಟೆ ಗ್ರಾಮದಲ್ಲಿ 64.9 ಸೆಂ.ಮೀ ಮಳೆಯಾಗಿದೆ. ರಾಜ್ಯದ ಇತಿಹಾಸದಲ್ಲೇ ಇಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).