ನ್ಯೂಸ್

ಕೇರ್ ಟೇಕರ್ ಆಗಿ ಹೋಗಿದ್ದ ಮನೆಯಿಂದಲೇ ಚಿನ್ನಾಭರಣ 'ಟೇಕ್' ಮಾಡಿದ!

ಬೆಂಗಳೂರು: ಮನೆಯೊಂದಕ್ಕೆ ಕೇರ್ ಟೇಕರ್ ಆಗಿ ಹೋಗಿದ್ದ ಈ ಭೂಪ ಅದೇ ಮನೆಯಲ್ಲೇ ಕಳ್ಳತನ ಮಾಡಿದ್ದ. ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಈತನನ್ನು ಆರ್.ಆರ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹಾವೇರಿ ಮೂಲದ ಬಸವರಾಜ ಎಂದು ಗುರುತಿಸಲಾಗಿದೆ. ಈತ ಪಿ.ಎನ್ ಕುಲಕರ್ಣಿ ಎಂಬುವರ ಮನೆಯಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ. ಈ ಭೂಪ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಹತ್ತು ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ.

ಈ ಬಗ್ಗೆ ಗೊತ್ತಾದಾಗ ಮನೆ ಮಾಲೀಕ ಪಿ.ಎನ್ ಕುಲಕರ್ಣಿ ಆರ್​ಆರ್ ನಗರ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 10ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.