ನ್ಯೂಸ್

VIDEO | ಸಮೋಸ ಪ್ರಿಯರೇ ಎಚ್ಚರ!; ಒಮ್ಮೆ ಈ ವಿಡಿಯೋ ನೋಡಿ ಶಾಕ್​ ಆಗ್ತೀರಾ

ಉತ್ತರಪ್ರದೇಶ: ವ್ಯಕ್ತಿಯೊಬ್ಬರು ಸ್ವೀಟ್​ ಅಂಗಡಿಯಿಂದ ಖರೀದಿ ಮಾಡಿದ್ದ ಸಮೋಸದೊಳಗೆ ಹಲ್ಲಿ ಪತ್ತೆಯಾಗಿದ್ದು, ಇದನ್ನು ಸೇವಿಸಿದ ತಂದೆ-ಮಗಳು ಅಸ್ವಸ್ಥರಾಗಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಉತ್ತರಪ್ರದೇಶದ ಹಾಪುರ್‌ನಲ್ಲಿ ವರದಿಯಾಗಿದೆ.

ಈ ದೃಶ್ಯ ನೋಡಿದ ಬಳಿಕ ಸಮೋಸ ಪ್ರಿಯರಲ್ಲಿ ತೀವ್ರ ಆತಂಕ ಎದುರಾಗಿದೆ. ಹಬ್ಬ ಹರಿದಿನಗಳ ಹಿನ್ನೆಲೆ ಮನೆಗೆ ಸಂಬಂಧಿಕರು ಆಗಮಿಸಿದ್ದರಿಂದ ವ್ಯಕ್ತಿಯೊಬ್ಬರು ಅವರಿಗೆ ತಿನ್ನಲು ಸ್ವೀಟ್ ಅಂಗಡಿಯಿಂದ ಸಮೋಸಗಳನ್ನು ಖರೀದಿಸಿ, ತಂದಿದ್ದರು. ಎಲ್ಲರಿಗೂ ಸಮೋಸವನ್ನು ಕೊಟ್ಟು, ತಾವು ತಮ್ಮ ಮಗಳೊಂದಿಗೆ ಸಮೋಸ ಸೇವಿಸಿದ್ದಾರೆ. ಈ ವೇಳೆ ಅದರೊಳಗೆ ಇದ್ದ ಹಲ್ಲಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಸಮೋಸ ಸೇವಿಸಿದ ತಂದೆ-ಮಗಳು ಅಸ್ವಸ್ಥರಾಗಿದ್ದು, ಈ ವಿಚಾರ ಕುರಿತಂತೆ ಕುಟುಂಬದವರು ಅಂಗಡಿ ಮಾಲೀಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ​ ದೂರು ದಾಖಲಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸತ್ತ ಹಲ್ಲಿ ಇರುವ ಸಮೋಸವನ್ನು ವ್ಯಕ್ತಿಯೊಬ್ಬರು ಕ್ಯಾಮರಾಗೆ ತೋರಿಸಿರುವುದು ದೃಶ್ಯದಲ್ಲಿ ನೋಡಬಹುದು,(ಏಜೆನ್ಸೀಸ್).