ಸಾಂದರ್ಭಿಕ ಚಿತ್ರ 
ನ್ಯೂಸ್

ಆಸ್ಪತ್ರೆಯಿಂದ ಶಿಶು,ಪತ್ನಿಯನ್ನು ಡಿಸ್ಚಾರ್ಜ್​ ಮಾಡಿಸಲು ಮೊದಲ ಮಗು ಮಾರಿದ ತಂದೆ!

ಲಖನೌ: ನವಜಾತ ಶಿಶು ಮತ್ತು ಪತ್ನಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಲು ಹಣವಿಲ್ಲದೆ ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಮಗನನ್ನು ಮಾರಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಕುಶಿನಗರದ ಬರ್ವಾಪಟ್ಟಿಯಲ್ಲಿ ನಡೆದಿದೆ.

ಬರ್ವಾಪಟ್ಟಿಯ ಹರೀಶ್‌ ಪಟೇಲ್‌ ಹೆರಿಗೆಗಾಗಿ ತನ್ನ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ಹೆರಿಗೆ ನಂತರ ಆಸ್ಪತ್ರೆಯಲ್ಲಿ ನಾಲ್ಕು ಸಾವಿರ ಬಿಲ್‌ ಆಗಿದ್ದು, ಬಡತನದ ಕಾರಣ ಪತ್ನಿ ಮತ್ತು ನವಜಾತ ಶಿಶುವನ್ನು ಡಿಸ್ಚಾರ್ಜ್‌ ಮಾಡಿಸಲು ಹಣವಿಲ್ಲದೆ ಪರಿತಪಿಸಿದ್ದಾನೆ.

ಆಗ ಆಸ್ಪತ್ರೆಯ ಸಿಬ್ಬಂದಿ ಸಲಹೆ ಮೇರೆಗೆ ತನ್ನ ಮೂರು ವರ್ಷದ ಮಗನನ್ನು 20 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಸ. 7 ರಂದು ಈ ಘಟನೆ ನಡೆದಿದ್ದು, ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಮಗುವನ್ನು ರಕ್ಷಿಸಿ ಐವರನ್ನು ಬಂಧಿಸಿದ್ದಾರೆ.