ಲಂಡನ್: ಆನ್ಲೈನ್ ಶಾಪಿಂಗ್ನಲ್ಲಿ ಕೆಲವು ಸಲ ಆರ್ಡರ್ ಮಾಡಿದ್ದ ವಸ್ತುಗಳಿಗಿಂತ ಇನ್ನೇನೋ ಬೇರೆ ವಸ್ತುಗಳು ಬಂದು ಶಾಕ್ ಆಗುವುದುಂಟು. ಇದಿರಂದ ಗ್ರಾಹಕರು ಪಡಪಾರದ ಪಡಿಪಾಟಲನ್ನು ಪಡುತ್ತಾರೆ.
ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಆನ್ಲೈನ್ ಶಾಪಿಂಗ್ನಲ್ಲಿ ಮಾಡಿದ್ದು ಸೇಬು ಹಣ್ಣಾದರೂ ಅವನಿಗೆ ತಲುಪಿದ್ದು ದುಬಾರಿ ಬೆಲೆಯ ಆ್ಯಪಲ್ ಮೊಬೈಲ್. ಇದರಿಂದ ಆತ ಕುಣಿದು ಕುಪ್ಪಳಿಸಿದ್ದಾನೆ.
ನಿಕ್ ಜೇಮ್ಸ್ ಎನ್ನುವ 50 ವರ್ಷದ ಲಂಡನ್ನ ಟ್ವಿಕನ್ ಹ್ಯಾಮ್ನ ವ್ಯಕ್ತಿ ಇತ್ತೀಚೆಗೆ Tesco ಎನ್ನುವ ಇ ಕಾಮರ್ಸ್ ತಾಣದಲ್ಲಿ ತರಕಾರಿ ಜೊತೆಗೆ ಸೇಬು ಹಣ್ಣುಗಳನ್ನು ಆರ್ಡರ್ ಮಾಡಿದ್ದಾನೆ. ನಿಗದಿಯಂತೆ ಆತನ ಮನೆಗೆ ತರಕಾರಿ ಹಾಗೂ ಹಣ್ಣು ಬಂದಿದೆ. ಆದರೆ ಸೇಬು ಇರಬೇಕಾದ ಜಾಗದಲ್ಲಿ ಆ್ಯಪಲ್ ಐಫೋನ್ ಎಸ್ ಬಂದಿದೆ. ಒಂದು ಕ್ಷಣ ದಂಗಾದ ನಿಕ್ ಜೇಮ್ಸ್ ತಾನು ಆರ್ಡರ್ ಮಾಡಿದ್ದ ಚೀಟಿಯನ್ನು ನೋಡಿದ್ದಾನೆ. ಅಲ್ಲೂ ಕೂಡ ಸೇಬು ಹಣ್ಣು ಎಂದೇ ಇತ್ತು.
ಕಡೆಗೆ Tesco ಕಂಪನಿಯನ್ನು ವಿಚಾರಿಸಿದ್ದಾಗ ಗೊತ್ತಾಗಿದ್ದು Tesco ಕಂಪನಿ ತನ್ನು ಮಾರುಕಟ್ಟೆಯನ್ನು ವಿಸ್ತರಣೆ ಮಾಡಲು ಈ ರೀತಿ ಗ್ರಾಹಕರಿಗೆ ವಿಶೇಷ ಉಡುಗೊರೆಗಳನ್ನು ನೀಡಲು ಮುಂದಾಗಿದೆಯಂತೆ. ಅದರಲ್ಲೂ ದುಬಾರಿ ಐ ಫೋನ್ ನೀಡಲು ಮುಂದಾಗಿದೆಯಂತೆ. ಒಟ್ಟಿನಲ್ಲಿ ಸೇಬು ಹಣ್ಣು ಆರ್ಡರ್ ಮಾಡಿದವನಿಗೆ ಆ್ಯಪಲ್ ಮೊಬೈಲ್ ಬಂದಿದ್ದು, ಏನ್ ಗುರು ಲಡ್ಡು ಬಂದು ಬಾಯಿಗೆ ಬಿತ್ತಾ ಎನ್ನುವಂತಾಗಿದೆ.