ಈಗಂತೂ ಬಹುಪಾಲು ಜನರು ಆನ್ಲೈನ್ ಶಾಪಿಂಗ್ಗೆ ಜೋತು ಬಿದ್ದಿದ್ದಾರೆ. ಅದೇನೇ ಇರಲಿ..ಥಟ್ ಅಂತ ಆನ್ಲೈನ್ನಲ್ಲಿ ಬುಕ್ ಮಾಡಿ, ಅದನ್ನು ಮನೆಗೆ ಮುಟ್ಟಿಸುವ ಡೆಲಿವರಿ ಬಾಯ್ಗಾಗಿ ಕಾಯುತ್ತ ಕೂರುತ್ತಾರೆ.
ಅದೆಷ್ಟೋ ಜನರಿಗೆ ಈಗಾಗಲೇ ಆನ್ಲೈನ್ ಶಾಪಿಂಗ್ ಕೆಟ್ಟ ಅನುಭವವನ್ನೂ ಕೊಟ್ಟಿದೆ. ಈಗ ಯುಎಸ್ನ ಗ್ರಾಹಕನೋರ್ವ ಆನ್ಲೈನ್ನಲ್ಲಿ ಬಟ್ಟೆ ಬುಕ್ ಮಾಡಿ ಪೇಚಿಗೆ ಸಿಲುಕಿದ ಘಟನೆಯನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಆರೋಗ್ಯದಲ್ಲಿ ಏರುಪೇರು; ದೆಹಲಿಯಿಂದ ಗೋವಾಕ್ಕೆ ಬಂದ ವೈದ್ಯರ ತಂಡ
ಅಮೆರಿಕದಲ್ಲಿ ಕ್ರೀಡಾ ಉಡುಪುಗಳು, ಉಪಕರಣಗಳು, ಶೂ ಮತ್ತಿತರ ಸಾಮಗ್ರಿಗಳನ್ನು ಸರಬರಾಜು ಮಾಡುವ ನೈಕ್ ಸಂಸ್ಥೆ ಬಟ್ಟೆಗಳಿಗಾಗಿ ಬೆಂಜಮಿನ್ ಸ್ಮಿಥಿ ಎಂಬುವರು ಆನ್ಲೈನ್ನಲ್ಲಿ ಬುಕ್ ಮಾಡಿದ್ದರು. ಹಾಗೇ ನೈಕ್ ರಟ್ಟಿನ ಪೆಟ್ಟಿಗೆಯಲ್ಲಿ ಬಟ್ಟೆಗಳನ್ನು ಪ್ಯಾಕ್ ಮಾಡಿ, ಬೆಂಜಮಿನ್ ಅವರ ಮನೆಗೆ ಡೆಲಿವರಿ ಕೊಟ್ಟಿತ್ತು. ಆದರೆ ಪೆಟ್ಟಿಗೆಯನ್ನು ತೆರೆಯುತ್ತಿದ್ದಂತೆ ಬೆಂಜಮಿನ್ ಮಾತ್ರ ತೀವ್ರ ಅಸಹ್ಯದಿಂದ ಹಿಂದೆ ಸರಿದರು. ಕಾರಣ ಅದರ ತುಂಬ ಒಂದಷ್ಟು ಉದ್ದದ ಹುಳುಗಳು ನಿಧಾನಕ್ಕೆ ತೆವಳುತ್ತಿದ್ದವು.
ಅದನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಬೆಂಜಮಿನ್, ನಾನು ನೈಕ್ನಿಂದ ಬಟ್ಟೆಗಳನ್ನು ಆರ್ಡರ್ ಮಾಡಿದ್ದೆ. ಆದರೆ ರಟ್ಟಿನ ಪೆಟ್ಟಿಗೆ ತೆಗೆದರೆ ಡಜನ್ಗಟ್ಟಲೆ ಹುಳುಗಳು ಇವೆ. ಬಟ್ಟೆಗಳಿರುವ ಪ್ಲಾಸ್ಟಿಕ್ ಕವರ್ ಒಳಗೂ ತೆವಳುತ್ತಿದ್ದವು. ನನಗಂತೂ ಏನು ಮಾಡಬೇಕು ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಇಂದು 5861 ಹೊಸ ಕರೊನಾ ಕೇಸ್ಗಳು ಪತ್ತೆ; 8000ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಹಾಗಂತ ಬಟ್ಟೆಗಳಿದ್ದ ರಟ್ಟಿನ ಪೆಟ್ಟಿಗೆ ಎಲ್ಲೂ ಚೂರು ಡ್ಯಾಮೇಜ್ ಆಗಿರಲಿಲ್ಲ. ಅಂದರೆ ಅದನ್ನು ಪ್ಯಾಕ್ ಮಾಡುವಾಗ ಹುಳವಿದ್ದರೂ ಗಮನಿಸದೆ, ಬೇಜವಾಬ್ದಾರಿತನವನ್ನು ಸಂಸ್ಥೆಯವರೇ ತೋರಿಸಿದದ್ದಾರೆ ಎಂದು ಅರ್ಥವಲ್ಲವೇ? ರಟ್ಟಿನ ಪೆಟ್ಟಿಗೆಯಲ್ಲಿ ಮೂರು ಬಟ್ಟೆಗಳಿದ್ದವು. ಆ ಬಟ್ಟೆಗಳ ಮಧ್ಯೆ ಈ ಹುಳಗಳು ತುಂಬಿದ್ದವು ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.
ನಂತರ ಕಂಪನಿಯ ಬಳಿ ಮಾತನಾಡಿದೆ. ಬಟ್ಟೆ ವಾಪಸ್ ತೆಗೆದುಕೊಂಡು ಹಣ ನೀಡುವುದಾಗಿ ಹೇಳಿದ್ದಾರೆ ಎಂಬುದನ್ನೂ ಬೆಂಜಮಿನ್ ತಿಳಿಸಿದ್ದಾರೆ. ಫೋಟೋ ನೋಡಿದ ನೆಟ್ಟಿಗರೂ ಅಸಹ್ಯಪಟ್ಟುಕೊಂಡಿದ್ದಾರೆ. (ಏಜೆನ್ಸೀಸ್)