ನ್ಯೂಸ್

ಪತ್ನಿ, ಮಗಳನ್ನು ಕೊಂದು Parents ಮೇಲೆ ಮಾರಣಾಂತಿಕ ಹಲ್ಲೆ; ಬಳಿಕ ಕತ್ತು ಸೀಳಿಕೊಂಡು ಪ್ರಾಣ ಬಿಡಲು ಮುಂದಾದ ವ್ಯಕ್ತಿ

ಸೂರತ್​: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ, ಮಗುವನ್ನು ಕೊಂದು ತಂದೆ-ತಾಯಿ (Parents) ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಆರೋಪಿ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಸರ್ತಾನಾ ಠಾಣೆಯ ಪೊಲೀಸ್​ ಅಧಿಕಾರಿಯೊಬ್ಬರು, ಸೂರ್ಯ ಟವರ್​ ಸೊಸೈಟಿಯಲ್ಲಿ ಬೆಳಗ್ಗೆ 09 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಆರೋಪಿ ಸ್ಮಿತ್​ ಜಿಯಾನಿ ತನ್ನ ಪತ್ನಿ ಹಾಗೂ ಮಗುವನ್ನು ಕೊಂದು ಬಳಿಕ ತಂದೆ ತಾಯಿಯ (Parents) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

ನೆರೆಹೊರೆಯವರು ನೀಡಿದ ಮಾಹಿತಿ ಆಧರಿಸಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ಹಾಗೂ ಹಲ್ಲೆಗೊಳಗಾಗಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಕೌಟುಂಬಿಕ ಕಲಹದಿಂದಾಗಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಸರ್ತಾನಾ ಠಾಣೆಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಮೂಲತಃ ಅಮ್ರೇಲಿಯ ಸಾವರಕುಂಡ್ಲಾದಿಂದ ಬಂದಿರುವ ಕುಟುಂಬದಲ್ಲಿ ಆಂತರಿಕ ಕಲಹವಿತ್ತು ಎನ್ನಲಾಗಿದೆ.ಕೌಟುಂಬಿಕ ಒತ್ತಡಗಳು ಸ್ಮಿತ್ ಅವರನ್ನು ಈ ಕೃತ್ಯಕ್ಕೆ ಪ್ರೇರೇಪಿಸಿರಬಹುದು ಎಂದು ನೆರೆಹೊರೆಯವರು ಹೇಳಿದ್ದು, ಪೊಲೀಸರು ಇವರುಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.