ನ್ಯೂಸ್

ಸೋದರ ಮಾವನನ್ನೇ ಹತ್ಯೆ ಮಾಡಿ ಬೆಡ್​ಬಾಕ್ಸ್​ನಲ್ಲಿಟ್ಟು ಸುಟ್ಟು ಹಾಕಿದ ಸಂಬಂಧಿಗಳು

ಅಮೃತಸರ: ವ್ಯಕ್ತಿ ಒಬ್ಬರನ್ನು ಕೊಲೆ ಮಾಡಿ ಅವರ ಮೃತದೇಹವನ್ನು ಬೆಡ್​ ಬಾಕ್ಸ್​ನಲ್ಲಿಟ್ಟು ಸುಟ್ಟು ಹಾಕಿರುವ ಘಟನೆ ಪಂಜಾಬ್​ನ ಲುಧಿಯಾನದಲ್ಲಿ ನಡೆದಿದೆ.

ಮೃತರನ್ನು ಗುರ್​ದೀಪ್​ ಸಿಂಗ್(61) ಎಂದು ಗುರುತಿಸಲಾಗಿದ್ದು, ಪ್ರಕರಣ ಸಂಬಂಧ ಮಹಿಳೆ ಸೇರಿದಂತೆ ಮೂವರನ್ನು ಲುಧಿಯಾನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ಧಾರೆ.

ಪ್ರಕರಣದ ಹಿನ್ನಲೆ?

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಲುಧಿಯಾನ ಪೊಲೀಸ್​ ಆಯುಕ್ತ ಮನ್​ದೀಪ್​ ಸಿಂಗ್​ ಸಿಧು ಮಾಡೆಲ್​ ಗ್ರಾಮ್​ ಗ್ರಾಮದ ಸುಖ್ವಿಂದರ್​ ಸಿಂಗ್​ ಹಾಗೂ ಗುರ್​ದೀಪ್​ ಸಿಂಗ್​ ವರಸೆಯಲ್ಲಿ ಮಾವ-ಆಳಿಯನಾಗಿದ್ದು, ಬಂಧಿತ ಆರೋಪಿಯ ಸಹೋದರಿ ಜಸ್​ಪ್ರೀತ್​ ಕೌರ್​ಗೆ ಗುರ್​ದೀಪ್​ ಸಿಂಗ್​ ಹಲವು ದಿನಗಳಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ.

ಈ ವಿಚಾರವನ್ನು ಜಸ್​ಪ್ರೀತ್​ ತನ್ನ ಸಹೋದರನ ಬಳಿ ಹೇಳಿಕೊಂಡಿದ್ದು, ಗುರ್​ದೀಪ್​ ಸಿಂಗ್​ ಕೊಲೆ ಮಾಡುವಂತೆ ಹೇಳಿ 50 ಸಾವಿರ ರೂ. ಹಣವನ್ನು ಕೊಟ್ಟಿದ್ದಾಳೆ. ಬಳಿಕ ಸುಖ್ವಿಂದರ್​​ ಆತನ ಸಹಚರ ಹತರಾಸ್​ ಮೂಲದ ಯೋಗೇಶ್​ ಕುಮಾರ್​ ಜೊತೆಗೂಡಿ ಬಡೋವಾಲ್​ನಲ್ಲಿರುವ ಗುರ್​ದೀಪ್​ ನಿವಾಸದಲ್ಲಿ ಅವರ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.

ಬೆಡ್​ಬಾಕ್ಸ್​ನಲ್ಲಿ ಸಾಗಾಟ

ಬಳಿಕ ಕೊಲೆ ವಿಚಾರ ಹೊರಬಾರದೆ ಇರುವುದಕ್ಕೆ ಶವವನ್ನು ಬೆಡ್​ಬಾಕ್ಸ್​ನಲ್ಲಿ ಇಟ್ಟು ಗ್ರಾಮದ ಹೊರಭಾಗದಲ್ಲಿ ಇರುವ ಹೊಲ ಒಂದರಲ್ಲಿ ಬಿಸಾಡಿ ಬೆಂಕಿ ಹಚ್ಚಿದ್ದಾರೆ. ಇದನ್ನು ಗಮನಿಸಿದ ಭರಭೂರ್ ಸಿಂಗ್ ಎಂಬುವವರು ವಿಚಾರವನ್ನು ಪೊಲೀಸರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರದೇಶದ ಸುತ್ತ ಇರುವ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಜಅಡು ಪತ್ತೆಯಾಗಿದೆ.

ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಲುಧಿಯಾನ ಪೊಲೀಸ್​ ಆಯುಕ್ತರಾದ ಮನ್​ದೀಪ್​ ಸಿಂಗ್​ ಸಿಧು ತಿಳಿಸಿದ್ದಾರೆ.