ನ್ಯೂಸ್

ಶ್ವಾಸಕೋಶದಲ್ಲಿ ಸಿಲುಕಿಕೊಂಡ ಕೃತಕ ಬೆಳ್ಳಿ ಹಲ್ಲುಗಳು..!

ಯುನೈಟೆಡ್​ ಸ್ಟೇಟ್ಸ್​​: 22 ವರ್ಷದ ವ್ಯಕ್ತಿಯೊರ್ವನ ಶ್ವಾಸಕೋಶದಲ್ಲಿ ಕೃತಕ ಬೆಳ್ಳಿ ಹಲ್ಲುಗಳು ಸಿಲುಕಿ ಹಾಕಿಕೊಂಡಿರುವ ಘಟನೆ ಯುನೈಟೆಡ್​ ಸ್ಟೇಟ್ಸ್​​ನಲ್ಲಿ ನಡೆದಿದೆ. ಈ ಕುರಿತ ಎಕ್ಸ್-ರೇ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಘಟನೆಯ ಕುರಿತು ಕೇಸ್ ಸ್ಟಡಿ ಕ್ಯೂರಿಯಸ್ ಜರ್ನಲ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಪ್ರಕಟವಾಗಿದ್ದು, ವಿಸ್ಕಾನ್ಸಿನ್‌ನ 22 ವರ್ಷದ ವ್ಯಕ್ತಿಯೋರ್ವ ಅಪಘಾತದಲ್ಲಿ ತನ್ನ ಹಲ್ಲುಗಳನ್ನು ಕಳೆದುಕೊಂಡಿದ್ದರಿಂದ ಆತನಿಗೆ ಕೃತಕ ಬೆಳ್ಳಿ ಹಲ್ಲುಗಳನ್ನು ಜೋಡಿಸಲಾಗಿತ್ತು. ಹಲವು ದಿನಗಳ ನಂತರ ಆ ವ್ಯಕ್ತಿ ಆಕಸ್ಮಿಕವಾಗಿ ಇದನ್ನು ನುಂಗಿದ್ದು, ಅದು ಶ್ವಾಸಕೋಶದ ಶ್ವಾಸನಾಳದಲ್ಲಿ ಸಿಲುಕಿಕೊಂಡು ಜೀವನ್ಮರಣ ಹೋರಾಟವನ್ನು ಮಾಡುತ್ತಿದ್ದ.

ಹಲವಾರು ಪರೀಕ್ಷೆಗಳನ್ನು ನಡೆಸಿದ ವೈದ್ಯರ ತಂಡವು ಬ್ರಾಂಕೋಸ್ಕೋಪಿ ನಡೆಸಿ ಈ ಕೃತಕ ಹಲ್ಲುಗಳನ್ನು ತೆಗೆದು ಹಾಕುವಲ್ಲಿ ಯಶಸ್ವಿಯಾಗಿದ್ದು, ಅನ್ನನಾಳದ ಮೂಲಕ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹಾದುಹೋಗುವ ಬದಲು ಈ ಕೃತಕ ಹಲ್ಲುಗಳು ಅವನ ಶ್ವಾಸಕೋಶಕ್ಕೆ ಸಿಲುಕಿ ಹಾಕಿಕೊಂಡಿತ್ತು. ಹಾಗಾಗಿ ಅವನಿಗೆ ಉಸಿರಾಟದ ತೊಂದರೆ ಎದುರಾಗಿತ್ತು ಸದ್ಯ, ಅವನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದಿದ್ದಾರೆ.(ಏಜೆನ್ಸೀಸ್)