ನ್ಯೂಸ್

ಮಗ-ಸೊಸೆ ಸೆಕ್ಸ್ ಮಾಡದಂತೆ ತಡೆದ ಮಾವ... ಕಾರಣ ಕೇಳಿದರೆ ನಿಮಗೂ ನಡುಕ ಹುಟ್ಟುತ್ತೆ

ಅಹಮದಾಬಾದ್: ಜಗತ್ತು ಎಷ್ಟೇ ಮುಂದುವರಿಯುತ್ತಿದ್ದರೂ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ನಿಲ್ಲುತ್ತಲೇ ಇಲ್ಲ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.

ಕುತೂಹಲಕಾರಿ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಸೊಸೆಗೆ ದೆವ್ವ ಹಿಡಿದಿದೆ ಎಂದು ಹೇಳಿ, ಆಕೆ ತನ್ನ ಪತಿಯೊಂದಿಗೆ ಸಂಭೋಗ ನಡೆಸುವುದನ್ನು ತಡೆದಿದ್ದಾನೆ.

ಈ ಕುರಿತು ವಡೋದರಾ ನಿವಾಸಿ ಮಹಿಳೆ ಇದೀಗ ಗಾಂಧಿನಗರದಲ್ಲಿ ಪೊಲೀಸ್ ಠಾಣೆ ಮೆಟ್ಟಲೇರಿ ದೂರು ದಾಖಲಿಸಿದ್ದಾಳೆ.

ಕಳೆದ ಫೆಬ್ರವರಿಯಲ್ಲಿ ವಡೋದರಾ ನ್ಯಾಯಾಲಯದಲ್ಲಿ ಅವರ ಮದುವೆಯಾಗಿದೆ. 43 ವರ್ಷದ ಮಹಿಳೆ ವಡೋದರಾ ಜಿಲ್ಲೆಯ ಅಲ್ಕಪುರಿ ಮೂಲದವಳಾಗಿದ್ದರೆ ಪತಿ ಗಾಂಧಿನಗರ ನಿವಾಸಿ.

ತನಗೆ ದೆವ್ವ ಹಿಡಿದಿದೆ ಎಂದೂ, ತನ್ನ ಗಂಡನೊಂದಿಗೆ ಸೆಕ್ಸ್ ಮಾಡಿದರೆ ಆಕೆಯ ದೆವ್ವ ಆತನ ದೇಹವನ್ನೂ ಪ್ರವೇಶಿಸುತ್ತದೆ ಎಂದು ಹೇಳುತ್ತಿರುವ ಮಾವ, ಈ ಗಂಡ-ಹೆಂಡತಿ ಲೈಂಗಿಕ ಕ್ರಿಯೆ ನಡೆಸದಂತೆ ತಡೆದಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.

ಇಂಥ ಅಸಮಂಜಸ ಹೇಳಿಕೆ ವಿರುದ್ಧ ಆಕೆ ಪ್ರತಿಭಟಿಸಿದಾಗ, ಆಕೆಯನ್ನು ಗಂಡನಮನೆಯವರು ಥಳಿಸಿದ್ದಾರೆ.

ನಂತರ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾಳೆ.

ತನಗೆ ದೆವ್ವ ಹಿಡಿದಿದೆ ಎಂದೂ, ತಾನು ಗಂಡನೊಂದಿಗೆ ಸಂಭೋಗ ನಡೆಸಿದರೆ ಆತನ ದೇಹವನ್ನೂ ದೆವ್ವ ಪ್ರವೇಶಿಸುತ್ತದೆ ಎಂದು ಅವರೆಲ್ಲ ನಂಬಿದ್ದಾರೆ. ಇವರೆಲ್ಲರ ಹೇಳಿಕೆಗೆ ವಿರೋಧಿಸಿದರೆ ತನಗೆ ಗಂಡನೂ ಸೇರಿ ಉಳಿದವರೆಲ್ಲರೂ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಾರೆ ಎಂದು ದೂರಿದ್ದಾಳೆ.

ಆಕೆಯ ಅತ್ತೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೊಸೆಗೆ ಲೈಂಗಿಕ ಕಿರುಕುಳ ನೀಡುವಂತೆ ಮಾವನನ್ನು ಪ್ರಚೋದಿಸುತ್ತಾಳೆ ಎಂದೂ ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ಮಾರ್ಚ್ 10 ರಂದು ಆಕೆಗೆ ಗಂಡನ ಮನೆಯಿಂದ ಹೊರಹೋಗಲು ಒತ್ತಾಯಿಸಿದರು. ಆನಂತರ, ಪರಿಚಯಸ್ಥರು, ಸಂಬಂಧಿಸಿಕರು ಮನೆಗೆ ಬಂದು ರಾಜಿ ಮಾಡಲೆತ್ನಿಸಿದರೂ ಗಂಡನ ಮನೆಯವರು ಆಕೆಯನ್ನು ಒಳಗೆ ಸೇರಿಸಲು ನಿರಾಕರಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ.

ಈ ಕುರಿತು ಪೊಲೀಸರನ್ನು ಸಂಪರ್ಕಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗಂಡನಮನೆಯವರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾಳೆ.