ನ್ಯೂಸ್

ಹೆಂಡತಿ ಮೇಲಿನ ಅನುಮಾನಕ್ಕೆ ಕಂಡ ಕಂಡವರಿಗೆ ಚಾಕು ಇರಿದ ಭೂಪ!

ಹಾಸನ: ಮಡದಿ ಮೇಲಿನ ಅನುಮಾನಕ್ಕೆ ಪುರುಷರು ಕಾನೂನನ್ನು ಕೈಗೆತ್ತಿಕೊಂಡು ಎಡವಟ್ಟು ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇಂದು ಬೆಳಗ್ಗೆ, ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಜಗಳವಾಡಿದ್ದ ಗಂಡ, ತನ್ನ ಹೆಂಡತಿಯನ್ನು ಡಂಬೆಲ್ಸ್​ನಿಂದ ಸಾಯುವವರೆಗೂ ಹೊಡೆದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದು ಪೊಲೀಸರನ್ನೂ ಬೆಚ್ಚಿಬೀಳಿಸಿತ್ತು.

ಈ ಫೋಟೋದಲ್ಲಿ ನೀವು ನೋಡುತ್ತಿರುವ ಭೂಪ ಹಾಸನ ಮೂಲದವನು. ಈತ ತನ್ನ ಹೆಂಡತಿ ಮೇಲಿನ ಅನುಮಾನಕ್ಕೆ ಸಿಕ್ಕಸಿಕ್ಕವರಿಗೆ ಚಾಕು ಇರಿದಿದ್ದಾನೆ. ಹೌದು! ಈ ವಿಚಿತ್ರ ಘಟನೆ ನಡೆದದ್ದು ಹಾಸನದ ಸಿದ್ದಯ್ಯ ನಗರದಲ್ಲಿ. ಹೆಂಡತಿ ಮೇಲಿನ ಅನುಮಾನಕ್ಕೆ ಈತ ತನ್ನದೇ ಬೀದಿಯ ನಿವಾಸಿ ಮೇಲೆ ಮನ ಬಂದಂತೆ ಚಾಕು ಇರಿದಿದ್ದಾನೆ.

ಈ ಘಟನೆಯಲ್ಲಿ ಗಾಯಗೊಂಡ ಆದಿತ್ಯ ಎನ್ನುವಾತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟಕ್ಕೇ ನಿಲ್ಲದ ರಾಜೇಶ್, ಹೆಂಡತಿ ಮೇಲಿನ ಅನುಮಾನಕ್ಕೆ ಹಲವರ ಮೇಲೆ ದಾಳಿ ಮಾಡಿದ್ದಾನೆ. ಈ ಪ್ರಕರಣದಿಂದಾಗಿ ಜನರು ಮತ್ತೊಮ್ಮೆ ಆಘಾತಕ್ಕೆ ಒಳಗಾಗಿದ್ದಾರೆ. ಸದ್ಯ ಹಾಸನದ ಪೆನ್ಷನ್ ಮೊಹೊಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.