ಉತ್ತರಪ್ರದೇಶ: ಹೆಚ್ಚು ವರದಕ್ಷಿಣೆ ನೀಡಿಲ್ಲ ಎಂದು ಈ ಪತಿರಾಯ ಸಿಟ್ಟು ಮಾಡಿಕೊಂಡಿದ್ದು ನಡು ರಸ್ತೆಯಲ್ಲೇ ಥಳಿಸಿದ್ದು ಬಳಿಕ ತಲಾಖ್ ತಲಾಖ್ ತಲಾಖ್ ಎಂದು ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಬಾಂಡಾ ಎಂಬಲ್ಲಿ ನಡೆದಿದೆ. ವರದಕ್ಷಿಣೆ ನೀಡಿದ್ದು ಕಡಿಮೆ ಆಗಿದೆ ಎಂದು ಪತ್ನಿಗೆ ಥಳಿಸಿ ಹಿಂಸಿಸಿದ ಕಾರಣ, ಆಕೆಗೆ ಗರ್ಭಪಾತವಾಗಿದ್ದು ಹುಟ್ಟಲಿದ್ದ ಮಗು ಸಾವನ್ನಪ್ಪಿದೆ.
ಟ್ರಿಪಲ್ ತಲಾಕ್ ಕಾಯ್ದೆ, ವರದಕ್ಷಿಣೆ ಕಿರುಕುಳ, ಕೊಲೆ ಯತ್ನ ಮತ್ತು ಇತರ ಆರೋಪಗಳಿಗೆ ಸಂಬಂಧಿಸಿದಂತೆ, ವಿವಿಧ ವಿಭಾಗಗಳ ಅಡಿಯಲ್ಲಿ ಪತಿ ಹಾಗೂ ಆತನ ಕುಟುಂಬದ ಆರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಲ್ಲಿನ ಠಾಣೆಯ SHO ಮನೋಜ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆಯಾಗಿ ಕಾರು, 10 ಲಕ್ಷ ರೂ. ಕೊಡಲಿಲ್ಲ ಎಂದು ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ!; ಪ್ರಕರಣ ದಾಖಲು
ದಂಪತಿಗಳು ನವೆಂಬರ್ 2020 ರಲ್ಲಿ ವಿವಾಹವಾಗಿದ್ದರು. ಮದುವೆಯ ಸಮಯದಲ್ಲಿ ತನ್ನ ತಂದೆ ಏನನ್ನು ಕೊಡಬಹುದೋ ಅದಕ್ಕಿಂತ ಹೆಚ್ಚಿನದ್ದನ್ನೇ ನೀಡಿದ್ದರು ಎಂದು ಮಹಿಳೆ ಹೇಳಿದ್ದಾರೆ. ಆದಾಗ್ಯೂ, ಅವಳ ಪತಿ ಮತ್ತು ಆತನ ಕುಟುಂಬ ಹೆಚ್ಚಿನ ಹಣವನ್ನು ಕೇಳುತ್ತಲೇ ಇತ್ತು. ಅವಳ ಪತಿ, ಅತ್ತೆ, ಅತ್ತಿಗೆ ಮತ್ತು ಇತರರು ಇನ್ನಷ್ಟು ವರದಕ್ಷಿಣೆ ತೆಗೆದುಕೊಂಡರು. ಆದಾಗ್ಯೂ, ಅವರು ಇನ್ನೂ 2 ಲಕ್ಷ ರೂ. ನೀಡಬೇಕು ಎನ್ನುವ ಬೇಡಿಕೆ ಇಟ್ಟಿದ್ದರು.
ಅತ್ತೆ ಮನೆಯವರು ತನ್ನ ಗಂಡನಿಗೆ ಮರುಮದುವೆ ಮಾಡಿಸಲು ಬಯಸಿದ್ದರು ಎಂದು ಮಹಿಳೆ ಆರೋಪಿಸಿದ್ದಾನೆ. ಅವಳ ಗಂಡನ ಮನೆಯವರು ದೈಹಿಕ ಕಿರುಕುಳದಿಂದಾಗಿ ಅವಳ ಗರ್ಭಪಾತವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಯುತ್ತಿದ್ದು ಈ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ.(ಏಜೆನ್ಸೀಸ್)