ತಮಿಳುನಾಡು: ವೇಗವಾಗಿ ಚಲಿಸುತ್ತಿದ್ದ ಎರಡು ಬಸ್ಗಳ ಮಧ್ಯೆ ಆಕಸ್ಮಿಕವಾಗಿ ಸಿಲುಕಿದ ವ್ಯಕ್ತಿ ಅದೃಷ್ಟವಶಾತ್ ಬದುಕಿ ಪಾರಾಗಿರುವ ಘಟನೆ ಇಲ್ಲಿನ ತಂಜಾವೂರಿನಲ್ಲಿ ಇತ್ತೀಚಿಗೆ ಬೆಳಕಿಗೆ ಬಂದಿದ್ದು, ಇದೀಗ ಈ ಭಯಾನಕ ಕ್ಷಣದ ವಿಡಿಯೋ(Viral Video) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಅದೃಷ್ಟವಶಾತ್ ಬದುಕುಳಿದ ವ್ಯಕ್ತಿ ಭರತ್ ಎಂದು ಗುರುತಿಸಲಾಗಿದೆ. ಇದೇ ಜ.3ರಂದು ಥಮರ್ಕೋಟೈನಿಂದ ಪಟ್ಟುಕೋಟೈಗೆ ಪ್ರಯಾಣಿಸಲು ಖಾಸಗಿ ಬಸ್ ಹತ್ತಲು ಪಾರದಾಡುತ್ತಿದ್ದ ಇತ. ಬಸ್ ಒಂದನ್ನೂ ಹಿಡಿಯಲು ರಸ್ತೆ ದಾಟುತ್ತಿರಬೇಕಾದರೆ ಏಕಾಏಕಿ ಬಂದ ಖಾಸಗಿ ಬಸ್ ಸರ್ಕಾರಿ ಬಸ್ ಅನ್ನು ಹಿಂದಿಕ್ಕಲು ರಭಸವಾಗಿ ಬಂದಿದೆ. ಸರ್ಕಾರಿ ಮತ್ತು ಖಾಸಗಿ ಬಸ್ಗಗಳ ಮಧ್ಯೆ ಸಿಲುಕಿದ ಭರತ್, ಊಹೆಗೂ ನಿಲುಕದ ಪರಿಸ್ಥಿತಿಯನ್ನು ಎದುರಿಸಿದ್ದಾರೆ.
ಏಕಾಏಕಿ ಬಂದ ಬಸ್ಗಳ ಮಧ್ಯೆ ಸಿಲುಕಿದ ಭರತ್, ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ, ಪರಿಸ್ಥಿತಿ ನಿಭಾಯಿಸಿದೆ ನೆಲಕ್ಕೆ ಉರುಳಿದ್ದಾರೆ. ಬಸ್ ಕೆಳಗೆ ಬಿದ್ದ ಇವರು ಎರಡು ಬಸ್ ಹೊದ ಬಳಿಕ ಮರುಳಿ ಎದ್ದು ಬಂದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. ಸಾಮಾನ್ಯವಾಗಿ ವಿಡಿಯೋ ನೋಡಿದವರಿಗೆ ಇವರ ಮೃತಪಟ್ಟಿರಬಹದು ಎನ್ನುವ ಭಾವನೆ ಬರುವುದರೊಳಗೆ ಬದುಕಿ ಬಂದಿದ್ದಾರೆ. ಇದರ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)