ಕೊಚ್ಚಿ: ಕೋಳಿಯೊಂದು (Rooster) ಪ್ರತಿನಿತ್ಯ ಕೂಗುವ ಮೂಲಕ ತನ್ನ ಆರೋಗ್ಯ ಹಾಗೂ ನಿದ್ರೆಯನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೋರ್ವ ಕಂದಾಯ ವಿಭಾಗೀಯ ಕಚೇರಿಗೆ (RDO) ದೂರು ನೀಡಿರುವ ವಿಚಿತ್ರ ಘಟನೆ ಕೇರಳದ ಪಥನಂತಿಟ್ಟಾ ಜಿಲ್ಲೆಯಲ್ಲಿ ನಡೆದಿದೆ.
ತನ್ನ ಮನೆಯ ಪಕ್ಕದಲ್ಲಿರುವ ಕೋಳಿಯೊಂದು (Rooster) ಪ್ರೆತಿನಿತ್ಯ ಮುಂಜಾನೆ ಮೂರು ಗಂಟೆಗೆ ಕೂಗುವ ಮೂಲಕ ತನ್ನ ನಿದ್ರೆ ಹಾಗೂ ಆರೋಗ್ಯವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿ ವ್ಯಕ್ತಿ ದೂರು ನೀಡಿದ್ಧಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಸಂತ್ರಸ್ತನಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ.
ಕೇರಳದ ಪಥನಂತಿಟ್ಟಾ ಜಿಲ್ಲೆಯ ಗ್ರಾಮವೊಂದರ ನಿವಾಸಿಯಾದ ರಾಧಾಕೃಷ್ಣ ಕುರುಪ್ ಎಂಬುವವರು ಕೋಳಿಯೊಂದು ಮುಂಜಾನೆ ಮೂರು ಗಂಟೆಗೆ ಪ್ರತಿನಿತ್ಯ ಕೂಗುತ್ತಿದ್ದು, ಇದು ತಮ್ಮ ಆರೋಗ್ಯ ಹಾಗೂ ನಿದ್ರೆಯನ್ನು ಹಾಳು ಮಾಡುತ್ತಿದೆ. ಈ ಬಗ್ಗೆ ಕೋಳಿ ಫಾರಂ ಮಾಲೀಕರಾದ ಅನಿಲ್ಗೆ ಸಂತ್ರಸ್ತೆ ವಿವರಿಸಿದ್ದು, ಅವರು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಬೇಸರಗೊಂಡು ಆಡೂರು ಕಂದಾಯ ವಿಭಾಗೀಯ ಕಚೇರಿಗೆ ದೂರು ನೀಡಿದ್ದಾರೆ.
ದೂರನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಸಂತ್ರಸ್ತನ ನೆರೆಹೊರೆಯವರನ್ನು ವಿಚಾರಿಸಿ ಸಮಸ್ಯೆ ಇರುವುದನ್ನು ಗಮನಿಸಿದ್ದಾರೆ. ಬಳಿಕ ವಾದ-ಪ್ರತಿವಾದವನ್ನು ಆಲಿಸಿ ಕೋಳಿ (Rooster) ಫಾರಂ ಮಾಲೀಕ ಅನಿಲ್ಗೆ 14 ದಿನದ ಒಳಗಾಗಿ ಬೇರೆಡೆ ಸ್ಥಳಾಂತರಿಸುವಂತೆ ಸೂಚಿಸಿ ಸಂತ್ರಸ್ತನಿಗೆ ನ್ಯಾಯ ಕೊಡಿಸಿದ್ದಾರೆ.
ಈ ವಿಚಾರ ಸದ್ಯ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಅಧಿಕಾರಿಗಳು ಪ್ರಕರಣವನ್ನು ಇತ್ಯರ್ಥಪಡಿಸಿದ ರೀತಿಗೆ ವ್ಯಾಪಕ ಮೆಚ್ಚುಗೆಗೆ ಗುರಿಯಾಗಿದೆ. ಅಲ್ಲದೇ ಕೋಳಿ ಫಾರಂ ಮಾಲೀಕನ ವಿರುದ್ಧವೂ ಜನರು ಹೌಹಾರಿದ್ದು, ವಸತಿ ಪ್ರದೇಶದಲ್ಲಿ ಕೋಳಿ ಫಾರಂ ತೆರೆದಿದ್ದನ್ನು ಖಂಡಿಸಿ ಕಿಡಿಕಾರುತ್ತಿದ್ದಾರೆ.