ನ್ಯೂಸ್

ಗ್ಯಾರಂಟಿಗಳ ವಿರುದ್ಧ ಪೋಸ್ಟ್​ ಹಾಕಿದ್ದ ವ್ಯಕ್ತಿ ಮೇಲೆ ದೂರು; ಸಮುದಾಯಗಳ ನಡುವೆ ಎತ್ತಿಕಟ್ಟುವ ಆರೋಪ

ಗದಗ: ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದ್ದು ವಿವಿಧ ಸಮುದಾಯಗಳ ನಡುವೆ ಎತ್ತಿಕಟ್ಟಿ ಜಗಳ ತರಿಸುವ ಆರೋಪವನ್ನು ಹೊರಿಸಲಾಗಿದೆ.

ಸರ್ಕಾರದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮುತ್ತಣ್ಣ ಮ್ಯಾಗೇರಿ ವಿರುದ್ಧ ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿ ಮುತ್ತಣ್ಣ ಮ್ಯಾಗೇರಿ, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ ಎನ್ನಲಾದ ಪೋಸ್ಟ್​ಗಳು ಈ ರೀತಿ ಇವೆ:

  1. ಷರತ್ತಿನ ಮೇಲೆ ಷರತ್ತು ಹಾಕಿ ಕೊನೆಗೆ ಅವರ ಬಾಂಧವರಿಗಷ್ಟೆ ಯೋಜನೆ ತಲುಪಿಸುವುದು ಗ್ಯಾರಂಟಿ ಉದ್ದೇಶ
  2. ಇಂದಿನಿಂದ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ವ್ಯಾನಿಟಿ ಬ್ಯಾಗಿಗೆ ಖಚಿತ ಇದು ಮುಲ್ಲಾ ಖಾನ್‌ ಆದೇಶ.
  3. ಸೀತಾಮಾತೆ ಲಂಕಾದಲ್ಲಿ ಇದ್ದ 11 ತಿಂಗಳು, 14 ದಿನವೂ ಸುರಕ್ಷಿತವಾಗಿದ್ದರು. ಯಾಕೆಂದರೆ, ರಾವಣ ವೇದ-ಪುರಾಣಗಳನ್ನು ಓದಿದ್ದನೇ ಹೊರತು ಕುರಾನ್‌ ಅಲ್ಲ

 ಈ ರೀತಿಯ ಪೋಸ್ಟ್​​ಗಳು ಸಮುದಾಯಗಳ ನಡುವೆ ಬಿರುಕು ತರುತ್ತವೆ. ಜನರ ನಡುವೆ ಎತ್ತಿ ಕಟ್ಟುವ ಪೋಸ್ಟ್‌ ಆಗಿದ್ದು ಇದನ್ನು ಹಂಚಿಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಕುರಿತಾಗಿ ಅರ್ಜುನ್‌ ಹನಮಂತಪ್ಪ ರಾಥೋಡ್‌ ಎಂಬುವವರು ದೂರು ನೀಡಿದ್ದು ಗಜೇಂದ್ರಗಡ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.