ನ್ಯೂಸ್

ಈ ವಿಡಿಯೋ ನೋಡಿದ್ರೆ ರಕ್ತ ಕುದಿಯುತ್ತದೆ; ತಂದೆಯ ಮುಖದ ಮೇಲೆ 25 ಬಾರಿ ಗುದ್ದಿ ಕೊಂದೆ ಬಿಟ್ಟ ಪಾಪಿ ಮಗ

ನವದೆಹಲಿ: ಆಸ್ತಿ ವ್ಯಾಮೋಹಕ್ಕೊಳಗಾದ ಮಗ ತನ್ನ ತಂದೆಗೆ ಬಲವಾಗಿ ಗುದ್ದಿ, ಒದಿದ್ದಾನೆ. ಈ ನೋವು ತಾಳಲಾರದೆ ವೃದ್ಧ ಪ್ರಾಣ ಬಿಟ್ಟಿದ್ದಾನೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಘಟನೆ ನಡೆದಿರುವುರು ಎಲ್ಲಿ ಎನ್ನುವ ಮಾಹಿತಿ ಇಲ್ಲ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವೃದ್ಧ ಮನೆಯ ಹೊರಗೆ ಕುರ್ಚಿಯ ಮೇಲೆ ಕುಳಿತಿದ್ದಾಗ, ಮಗ ಬಂದು ಅವನನ್ನು ಹೊಡೆಯಲು ಪ್ರಾರಂಭಿಸುತ್ತಾನೆ. ಬಲವಾಗಿ ಗುದ್ದಿದ ಬಳಿಕ ಮುದುಕ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಆದರೂ ತೃಪ್ತನಾಗದ ಮಗ ತಂದೆಯ ಮುಖಕ್ಕೂ ಕಾಲಿನಿಂದ ಹೊಡೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮಗ ತನ್ನ ವಯಸ್ಸಾದ ತಂದೆಗೆ 15 ಸೆಕೆಂಡುಗಳಲ್ಲಿ 25 ಬಾರಿ ಗುದ್ದಿ, ಒದೆಯುವುದನ್ನು ಕಾಣಬಹುದು. ಇನ್ನೊಬ್ಬ ವ್ಯಕ್ತಿ ಅವನನ್ನು ಹಿಡಿದು ಇನ್ನೊಂದು ಬದಿಗೆ ಕರೆದೊಯ್ಯುತ್ತಾನೆ. ಈ ವಿಡಿಯೋ ನೋಡಿ ಸೋಷಿಯಲ್ ಮೀಡಿಯಾ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರು ವಿಡಿಯೋ ಶೇರ್ ಮಾಡಿ ಇದು ಕಲಿಯುಗ ಎಂದು ಬರೆದುಕೊಂಡಿದ್ದಾರೆ.

ಜಾರ್ಖಂಡ್ ಬಿಜೆಪಿ ನಾಯಕ ಡಾ. ಧನಂಜಯ್ ಪುತುಶ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ . ಮಗನ ಈ ನೋವಿನ ಹೊಡೆತದಿಂದ ತಂದೆ ಜರ್ಜರಿತರಾಗಿದ್ದಾರೆ ಮತ್ತು ಅವರು ಕೆಲವು ದಿನಗಳ ನಂತರ ನಿಧನರಾದರು ಎಂದು ಬರೆದಿದ್ದಾರೆ. ನೆಟ್ಟಿಗರು ಕಾಮೆಂಟ್​​ ಮಾಡಿ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಯಾವುದೂ ಇಲ್ಲ. ಮೇಲಿನ ದೇವರು ಎಲ್ಲವನ್ನೂ ನೋಡುತ್ತಿದ್ದಾನೆ ಎಂದಿದ್ದಾರೆ.