ನವ ದೆಹಲಿ: ಬಿಸಿ ಬಿಸಿ ಚಹಾದೊಂದಿಗೆ, ಬಿಸಿಬಿಸಿ ಪಕೋಡಾ ತಿಂತಾ ಇದ್ರೆ ಸಮಯ ಕಳೆದದ್ದೇ ಗೊತ್ತಾಗೋದಿಲ್ಲ. ಹೀಗಾಗಿ ಸಂಜೆಯ ಹೊತ್ತಲ್ಲಿ ಪಕೋಡಾಗಳಿಗೆ ಭಾರೀ ಡಿಮ್ಯಾಂಡ್. ನಾವಿಂದು ವೆರೈಟಿ ಪಕೋಡಾಗಳನ್ನು ಸವಿಯಬಹುದು. ಫುಡ್ ಸ್ಟ್ರೀಟ್ಗೆ ಹೋದರೆ ಗೊಂದಲ ಆಗಿ ಬಿಡ್ತೀವಿ. ಯಾವ ವೆರೈಟಿ ಪಕೋಡಾ ತಿನ್ನುವುದೆಂದು. ಅಷ್ಟು ವಿಭಿನ್ನವಾದ ಪಕೋಡಾಗಳಿವೆ.
ವಿವಿಧ ತರಕಾರಿಗಳ ಪಕೋಡ ಸವಿದಿದ್ದೇವೆ. ಆದರೆ, ಇಲ್ಲೊಬ್ಬರು ಮಹಿಳೆ ತಳ್ಳೋಗಾಡಿಯಲ್ಲಿ ವೆರೈಟಿ ಪಕೋಡಾ ಮಾರಾಟ ಮಾಡ್ತಿದ್ದಾರೆ. ಆ ಪಕೋಡಾ ಯಾವ್ದಪ್ಪಾ ಅಂದ್ರೆ, ಚಾಕೋಲೇಟ್ ಪಕೋಡಾ. ಆಶ್ಚರ್ಯ ಆದ್ರೂ, ನಂಬಲೇಬೇಕು. ಇದೀಗ ಈ ಮಹಿಳೆ ಬಿಸಿಬಿಸಿ ಚಾಕೋಲೇಟ್ ಪಕೋಡಾ ಮಾಡಿ ಮಾರಾಟ ಮಾಡ್ತೀರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವಿಡಿಯೋ ನೋಡಿದ ಆಹಾರಪ್ರಿಯರು ತಾವೂ ಕೂಡಾ ಚಾಕೋಲೇಟ್ ಪಕೋಡಾ ಮಾಡೋದಕ್ಕೆ ಸಜ್ಜಾಗ್ತಿದ್ದಾರೆ.
ರಸ್ತೆ ಬದಿ ಮಹಿಳೆಯೊಬ್ಬರು ತಳ್ಳೋಗಾಡಿಯಲ್ಲಿ ಪಕೋಡಾ ಮಾಡಿ ಮಾರಾಟ ಮಾಡ್ತಿದ್ದಾರೆ. ಮೊದಲು ಚಾಕೋಲೇಟನ್ನು ಪಕೋಡಾ ಹಿಟ್ಟಿನೊಂದಿಗೆ ಎಣ್ಣೆಗೆ ಬಿಟ್ಟಿದ್ದಾರೆ. ಎಣ್ಣೆಯಲ್ಲಿ ಫ್ರೈ ಮಾಡಿ ಗ್ರಾಹಕರಿಗೆ ಸವಿಯಲು ನೀಡಿದ್ದಾರೆ. ಚಾಕೋಲೇಟ್ ಪಕೋಡಾ ಮಾಡುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಆಗುತ್ತಿದ್ದಂತೆ 1 ಲಕ್ಷ ಜನರು ವೀಕ್ಷಿಸಿದ್ದಾರೆ.
ಇತರೆ ಪಕೋಡಾಗಳಂತೆ ಗರಿಗರಿಯಾಗಿ ಚಾಕೋಲೇಟ್ ಪಕೋಡಾವನ್ನು ಸವಿಯಲು ಸಾಧ್ಯವಾಗುತ್ತದೆ. ಸ್ವಲ್ಪ ಖಾರವಾದ ಹಸಿರು ಚಟ್ನಿಯೊಂದಿಗೆ ಪಕೋಡಾ ಸೇವಿಸಿದಾಗ ಇದರ ರುಚಿ ಇನ್ನಷ್ಟು ಹೆಚ್ಚಿಸಬಹುದು ಎಂದು ವಿಡಿಯೋ ಅಪ್ಲೋಡ್ ಮಾಡಿರುವ ಆರ್.ಜೆ ರೋಹನ್ ಹೇಳಿದ್ದಾರೆ. (ಏಜೆನ್ಸೀಸ್)\