Revenge: ಬೊಗಳುತ್ತಿದ್ದ ನಾಯಿಗೆ ಶಾಪ ಹಾಕಿದ ನೆರೆಮನೆಯವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ, ಮೂಗು ಕತ್ತರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಜುಲೈ 8 ರಂದು ನೋಯ್ಡಾ ಜಿಲ್ಲೆಯ ನಾಟ್ ಕಿ ಮದೈಯಾ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ದೇವೇಂದ್ರ ಎಂದು ಗುರುತಿಸಲಾದ ಬಲಿಪಶು ತನ್ನ ಮನೆಯಲ್ಲಿದ್ದಾಗ ತನ್ನ ನೆರೆಯವರ ಸಾಕು ನಾಯಿ ಬೊಗಳಿದ್ದಕ್ಕಾಗಿ ಅದನ್ನು ಗದರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
"ದೇವೇಂದ್ರ ಸಾಕು ನಾಯಿಯನ್ನು ಗದರಿಸಿದನು, ಮತ್ತು ನಂತರ, ನೆರೆಯ ಸತೀಶ್, ಅವನ ಸಹೋದರ ಅಮಿತ್ ಮತ್ತು ಅವನ ಮಗ ತುಷಾರ್ ತಮ್ಮ ಮನೆಯಿಂದ ಹೊರಬಂದು ದೇವೇಂದ್ರ ಮತ್ತು ಅವನ ಹೆಂಡತಿ ಮುನ್ನಿ ದೇವಿಯನ್ನು ಹೊಡೆಯಲು ಪ್ರಾರಂಭಿಸಿದರು" ಎಂದು ಬಲಿಪಶುವಿನ ತಂದೆ ಸುಖ್‌ಬೀರ್ ಸಿಂಗ್ ತಮ್ಮ ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.
ಅವರು ದೇವೇಂದ್ರ ಮೇಲೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿ, ಮೂಗನ್ನು ಕತ್ತರಿಸಿ, ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮಂಗಳವಾರ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ದೇವೇಂದ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು. (ಏಜೆನ್ಸೀಸ್)