ನ್ಯೂಸ್

ಪಾಕ್​ ಏಜೆನ್ಸಿಗೆ ಸೇನೆಯ ಗೌಪ್ಯ ಮಾಹಿತಿ ರವಾನಿಸುತ್ತಿದ್ದ ಆರೋಪಿ ಬಂಧನ! |Arrested

Arrested: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (Inter-Services Intelligence) ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಹಿನ್ನಲೆ, ರಾಜಸ್ತಾನದ ಜೈಸಲ್ಮೇರ್​ನಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಜೈಸಲ್ಮೇರ್‌ನ ಬಸನ್‌ಪೀರ್ ಜೂನಿ ನಿವಾಸಿ ಹನೀಫ್ ಖಾನ್ (47) ಆರೋಪಿ ಎಂದು ತಿಳಿದುಬಂದಿದೆ. ಈತ ಹಣಕ್ಕಾಗಿ ಪಾಕಿಸ್ತಾನಿ ಏಜೆನ್ಸಿಗೆ ಸೇನೆಯ ಗೌಪ್ಯ ಮಾಹಿತಿಯನ್ನು ರವಾನಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಪ್ತಚರ ತಂಡವು ರಾಜ್ಯದಲ್ಲಿ ನಡೆಯುವ ಬೇಹುಗಾರಿಕೆ ಚಟುವಟಿಕೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಖಾನ್​ರವರ ಅನುಮಾನಾಸ್ಪದ ಚಟುವಟಿಕೆಗಳನ್ನು ಗುರುತಿಸಿದ್ದು, ಆತ ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನಿ ಗುಪ್ತಚರ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದ ಎಂದು ಮಾಹಿತಿ ತಿಳಿದ ಕೂಡಲೇ ಆತನನ್ನು ಬಂಧಿಸಲಾಗಿದೆ ಎಂದು ಸಿಐಡಿ ಐಜಿ ಡಾ. ವಿಷ್ಣುಕಾಂತ್ ಹೇಳಿದ್ದಾರೆ.

ಆರೋಪ ಏನು?

ಖಾನ್‌ಗೆ ಗಡಿ ಪ್ರದೇಶಗಳಿಗೆ ಪ್ರವೇಶವಿದ್ದ ಕಾರಣ ಅವರು ಭಾರತದ ಪ್ರಮುಖ ಮಿಲಿಟರಿ ಸ್ಥಾಪನೆಗಳು ಮತ್ತು ಸೇನಾ ಚಲನವಲನ ಹಾಗೂ ಆಪರೇಷನ್​ ಸಿಂಧೂರ ಸಮಯದಲ್ಲಿ ಸೇನೆಯ ಕಾರ್ಯಗಳ ಬಗ್ಗೆ ಪಾಕಿಸ್ತಾನಿ ನಿರ್ವಾಹಕರಿಗೆ ಮಾಹಿತಿ ನೀಡಿದ್ದಾರೆ ಎಂದು ತನಿಖೆಯ ಮೂಲಗಳು ತಿಳಿಸಿವೆ.

ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸಿದಾಗ ಹನೀಫ್ ಖಾನ್ ಐಎಸ್‌ಐಗೆ ಆರ್ಥಿಕ ಲಾಭಕ್ಕಾಗಿ ನಿರ್ಣಾಯಕ ಮಿಲಿಟರಿ ಗುಪ್ತಚರ ಮಾಹಿತಿಯನ್ನು ಒದಗಿಸುತ್ತಿದ್ದರು ಎಂದು ದೃಢಪಡಿಸಿದ್ದಾರೆ. ಇನ್ನು ಬಲವಾದ ಸಾಕ್ಷ್ಯಾಧಾರಗಳ ಪ್ರಕಾರ 1923 ರ ಅಧಿಕೃತ ರಹಸ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. (ಏಜೆನ್ಸೀಸ್​)