ನ್ಯೂಸ್

ಮೃಗೀಯ ವರ್ತನೆ; ಎಮ್ಮೆ ಕರುವಿನ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿ

ಭೋಪಾಲ್​: ವಿಲಕ್ಷಣಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ಎಮ್ಮೆ ಕರುವಿನ ಮೇಲೆ ಅತ್ಯಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ಸಂಬಂಧ ಎಮ್ಮೆಯ ಮಾಲೀಕ ಲಾಲ್​ಮನ್​ ಪಾಲ್​(60) ನೀಡಿದ ದೂರಿನ ಮೇರೆಗೆ ಪೊಲೀಸರು ಶ್ಯಾಮ್​ಬಿಹಾರಿ ಪಾಂಡೆ(50) ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ಧಾರೆ.

ಹಲವು ಬಾರಿ ಕೃತ್ಯ

ಕೃತ್ಯದ ಕುರಿತು ಪ್ರತಿಕ್ರಿಯಿಸಿರುವ ಎಮ್ಮೆಯ ಮಾಲೀಕ ಲಾಲ್​ಮನ್​ ಕಳೆದ 4-5 ತಿಂಗಳಿನಿಂದ ಶ್ಯಾಮ್​ಬಿಹಾರಿ ಎಂಬ ವ್ಯಕ್ತಿಯೂ ನನ್ನ ಒಂದೂವರೆ ವರ್ಷದ ಎಮ್ಮೆ ಕರುವಿನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

ಅವನು ಕರುವಿನ ಕೈ-ಕಾಲುಗಳನ್ನು ಕಟ್ಟಿ ಕೃತ್ಯ ಎಸಗುತ್ತಿದ್ದ. ಕಳೆದ 4-5 ತಿಮಗಳಿನಿಂದ ಎಮ್ಮೆ ಕರುವಿನ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಈ ಬಗ್ಗೆ ವೈದ್ಯರಿಗೆ ವಿಚಾರಿಸಿದಾಗ ಅವರು ಕೂಡ ಸರಿಯಾದ ಕಾರಣವನ್ನು ಹೇಳಲಿಲ್ಲ. ಬಳಿಕ ರಾತ್ರಿ ಹೊತ್ತು ನಾನೇ ಖುದ್ದು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಮಾಲೀಕ ಲಾಲ್​ಮನ್ ತಿಳಿಸಿದ್ದಾರೆ.

ಘಟನೆಯ ಕುರಿತು ಅಮರ್​ಪತನ್​ ಪೊಲೀಸ್​ ಠಾಣಾಧಿಕಾರಿ ಪ್ರತಿಕ್ರಿಯಿಸಿದ್ದು, ಎಮ್ಮೆಯ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕರುವಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಬಂದ ನಂತರ FIR ದಾಖಲಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಹಿಂದೆ ಮಧ್ಯಪ್ರದೇಶದ ಸೆಹೋರ್​ ಜಿಲ್ಲೆಯಲ್ಲಿ ಮೇಕೆಯ ಮೇಲೆ ಅತ್ಯಾಚಾರ ಎಸಗಿ ವ್ಯಕ್ತಿಯೋರ್ವ ವಿಕೃತಿ ಮೆರೆದಿದ್ದ.