ನ್ಯೂಸ್

ಮಗಳು ಸ್ನಾನ ಮಾಡುವುದನ್ನು 3 ವರ್ಷದಿಂದ ಕದ್ದು ವಿಡಿಯೋ ಮಾಡ್ತಿದ್ದ ತಂದೆ! ಮಗಳ ಕೈಗೆ ಸಿಕ್ಕಿಬಿದ್ದಿದ್ಹೇಗೆ?

ಲಂಡನ್​: ಮಗಳಿಗೆ ತಿಳಿಯದಂತೆ ಸುಮಾರು ಮೂರು ವರ್ಷ ಆಕೆ ಸ್ನಾನ ಮಾಡುವುದನ್ನು ಕದ್ದು ವಿಡಿಯೋ ಮಾಡುತ್ತಿದ್ದ ಮಲತಂದೆ, ಮಗಳ 18ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆಯ ವೇಳೆ ಸಿಕ್ಕಿಬಿದ್ದಂತಹ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಯುವತಿ ಲಾರೆನ್​ ಬ್ರೈಟ್​ವುಡ್​ಳನ್ನು ಆಕೆಯ ಮಲತಂದೆ ಥಾಮಸ್​ ಕ್ರೈಗ್​ ಲೆವಿಸ್​ ನಾಲ್ಕನೇ ವಯಸ್ಸಿನಿಂದಲೂ ನೋಡಿಕೊಳ್ಳುತ್ತಿದ್ದರಂತೆ. ಆದರೆ, ಕಳೆದ ಮೂರು ವರ್ಷಗಳಿಂದ 35 ವರ್ಷದ ಮಲತಂದೆ ಲೆವಿಸ್​, ಲಾರೆನ್​ ಕದ್ದು ಸ್ನಾನ ಮಾಡುವುದನ್ನು ವಿಡಿಯೋ ಮಾಡುತ್ತಿರುವುದು ಬಯಲಾಗಿದೆ.

ಲೆವಿಸ್​ ಯುನೈಟೆಡ್​ ಕಿಂಗ್​ಡಮ್​ನ ಸೌಥ್​ ವೇಲ್ಸ್​ನ ಲಾನೆಲ್ಲಿ ನಗರದ ನಿವಾಸಿ. ಪೊಲೀಸ್​ ತನಿಖೆಯ ಬಳಿಕ ಮಂಗಳವಾರ ನಾರ್ಥ್​ಹ್ಯಾಂಪ್ಟನ್​ ಕೋರ್ಟ್​ಗೆ ಹಾಜರಾದ ಲೆವಿಸ್​ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಕ್ಕೆ 18 ತಿಂಗಳ ಬದಲಾಗಿ, 10 ತಿಂಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದಾರೆ.

ಅಂದಹಾಗೆ ಈ ಘಟನೆ ನಡೆದಿದ್ದು 2018ರಲ್ಲಿ. 18ನೇ ವರ್ಷಕ್ಕೆ ಕಾಲಿಟ್ಟಿದ್ದ ಲಾರೆನ್​ ಹುಟ್ಟುಹಬ್ಬ ಆಚರಣೆಗೂ ಮುನ್ನ ಸ್ನಾನ ಮಾಡಲು ಹೋದ ಅವಳಿಗೆ ಬಾತ್​ರೂಮ್​​ನ ಕಿಟಕಿಯಲ್ಲಿ ಕ್ಯಾಮೆರಾವೊಂದು ಪತ್ತೆಯಾಗಿತ್ತಂತೆ. ತಕ್ಷಣ ಬಾತ್​ರೂಮ್​ನಿಂದಲೇ ಲಾರೆನ್​ ತನ್ನ ತಾಯಿ ಮೈಕೆಲ್ಲೆಗೆ ಮಾಹಿತಿ ತಿಳಿಸಿದ್ದಾಳೆ. ಬಳಿಕ ಮೈಕೆಲ್ಲೆ ತನ್ನ ಪತಿ ಲೆವಿಸ್ ಎದುರಾಗಿ ಪ್ರಶ್ನಿಸಿದಾಗ ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅನೇಕ ಬಾರಿ ಸ್ನಾನ ಮಾಡುವುದನ್ನು ರೆಕಾರ್ಡ್​ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ವೇಲ್ಸ್​ನ ಹಳೆಯ ಮನೆಯಲ್ಲಿದ್ದಾಗಲೂ ರೆಕಾರ್ಡ್​ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಬಳಿಕ ಪ್ರಕರಣ ದಾಖಲಿಸಿದಾಗ ತಾನೇ ಶರಣಾದ ಲೆವಿಸ್​ ಪೊಲೀಸ್​ ತನಿಖೆಯ ವೇಳೆಯೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸುಮಾರು 5 ರಿಂದ 10 ವಿಡಿಯೋವನ್ನು 14 ರಿಂದ 17ನೇ ವಯಸ್ಸಿನ ಅಂತರದಲ್ಲಿ ಲೆವಿಸ್​ ಮಾಡಿದ್ದಾರಂತೆ. ಇದೀಗ ನ್ಯಾಯಾಲಯಕ್ಕೂ ಹಾಜರಾಗಿರುವ ಲೆವಿಸ್​ಗೆ ತನಿಖಾ ನಂತರ 10 ತಿಂಗಳ ಶಿಕ್ಷೆಗೂ ಗುರಿಯಾಗಿದ್ದು, ಯಾವುದೇ ಸಂಬಳವಿಲ್ಲದೆ 30 ದಿನಗಳ ಕಾರಾಗೃಹ ಕೆಲಸದ ಶಿಕ್ಷೆಯನ್ನು ವಿಧಿಸಿದೆ ಮತ್ತು ಆಪ್ತ ಸಮಾಲೋಚನೆ ಕೊಡಿಸಲು ಸಹ ಕೋರ್ಟ್​ ಸೂಚಿಸಿದೆ.

ಇನ್ನು ಘಟನೆಯ ಬಗ್ಗೆ ಸ್ವತಃ ಮಾತನಾಡಿರುವ ಲಾರೆನ್​, ನನಗೆ ಕ್ಯಾಮೆರಾ ನೋಡಿ ಶಾಕ್​ ಆಯಿತು. ಅದು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದು ಸಹ ನನಗೆ ಗೊತ್ತಿರಲಿಲ್ಲ. ಏನು ಮಾಡಬೇಕೆಂದು ನನಗೆ ತಿಳಿಯಲಿಲ್ಲ. ನಾನು ಬಾತ್​ರೂಮ್​ಗಳಿಗೆ ಪ್ರವೇಶ ನೀಡುವಾಗಲೆಲ್ಲ ಇಂಥದೊಂದು ನಡೆಯದಿರಲಿ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಲೆವಿಸ್​ ನನ್ನ ಮಲತಂದೆ. ಆದರೆ, ನಾನು ನನ್ನ ಸ್ವಂತ ತಂದೆಯೆಂದೇ ಭಾವಿಸಿದ್ದೆ. ಹೀಗೆ ಮಾಡುತ್ತಾರೆಂದು ನಾನು ಭಾವಿಸಿರಲಿಲ್ಲ ಎಂದು ಲಾರೆನ್​ ದುಃಖಿತಳಾದಳು.

ಮಲ ತಂದೆಗೆ ಶಿಕ್ಷೆ ವಿಧಿಸಿದ್ದರ ಬಗ್ಗೆ ಮಾತನಾಡಿರುವ ಆಕೆ, ಈ ಶಿಕ್ಷೆಯನ್ನು ನಾನು ಬಯಸಿರಲಿಲ್ಲ. ಆದರೆ, ಕೋರ್ಟ್​ ಏನು ಹೇಳಿದೆಯೋ ಅದನ್ನು ಪಾಲಿಸಬೇಕಿದೆ. ನಿಜಕ್ಕೂ ಇದು ನಾಚಿಕೆ ಪಡುವ ಸಂಗತಿಯಾಗಿದೆ. ಮಲತಂದೆಯ ಲೆವಿಸ್ ಮಾಡಿದ ಕೃತ್ಯದ ಬಗ್ಗೆ ಮತ್ತು ಶಿಕ್ಷೆಯ ಬಗ್ಗೆ ಎಲ್ಲರಿಗೂ ಅರಿವಾದರೆ ಸಾಕು ಎಂದು ಲಾರೆನ್​ ಹೇಳಿದ್ದಾಳೆ. (ಏಜೆನ್ಸೀಸ್​)​