ನ್ಯೂಸ್

90ರ ದಶಕದಲ್ಲಿ ಅರೆ-ನಗ್ನ ಫೋಟೋಶೂಟ್ ಮಾಡಿಸಿದ್ದ ನಟಿ; ಈ ಬಗ್ಗೆ ಮೌನಮುರಿದ ಮಮತಾ ಕುಲಕರ್ಣಿ ಹೇಳಿದಿಷ್ಟು.. | Mamta Kulkarni

ಮುಂಬೈ: 'ಕರಣ್ ಅರ್ಜುನ್', 'ಕ್ರಾಂತಿವೀರ', 'ತಿರಂಗ' ಮುಂತಾದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಮಮತಾ ಕುಲಕರ್ಣಿ(Mamta Kulkarni) ಕಳೆದ ಹಲವು ವರ್ಷಗಳಿಂದ ಚಿತ್ರರಂಗದಿಂದ ನಾಪತ್ತೆಯಾಗಿದ್ದರು. ಈ ನಟಿ 90ರ ದಶಕದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು. ಅವರು ತಮ್ಮ ನಟನೆ ಮತ್ತು ಶೈಲಿಯಿಂದ ಲಕ್ಷಾಂತರ ಅಭಮಾನಿಗಳ ಮನಸ್ಸನ್ನು ಗೆದಿದ್ದರು. ಆದರೆ ವಿವಾದಗಳಲ್ಲಿ ಸಿಲುಕಿದ ನಂತರ ಬಾಲಿವುಡ್ ಮತ್ತು ಭಾರತ ಎರಡರಿಂದಲೂ ದೂರ ಹೋದರು.

ಪ್ರಸ್ತುತ ಅವರನ್ನು ಮಹಾಮಂಡಲೇಶ್ವರ ಹುದ್ದೆಯಿಂದ ಕೆಳಗಿಳಿಸಿರುವ ಸುದ್ದಿಯಲ್ಲಿದ್ದಾರೆ. ನಟಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವೈಯಕ್ತಿಕ ಜೀವನದಿಂದ ವೃತ್ತಿಪರ ಜೀವನದವರೆಗಿನ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದರು. ಅಲ್ಲದೆ 90ರ ದಶಕದಲ್ಲಿನ ತನ್ನ ಅರೆ-ನಗ್ನ ಫೋಟೋಶೂಟ್‌ ಬಗ್ಗೆಯೂ ಮೌನ ಮುರಿದರು.

ಸ್ಟಾರ್‌ಡಸ್ಟ್ ಮ್ಯಾಗಜೀನ್‌ಗಾಗಿ ಮಾಡಿದ ಅರೆ-ನಗ್ನ ಫೋಟೋಶೂಟ್ ಬಗ್ಗೆ ಸಂದರ್ಶನದಲ್ಲಿ ಕೇಳಲಾಯಿತು. ನೀವು ಏಕೆ ಟಾಪ್‌ಲೆಸ್ ಆಗಿ ಪೋಸ್ ನೀಡಿದ್ದೀರಿ? ಎಂದು ಕೇಳಿದಾಗ ಅದಕ್ಕೆ ಉತ್ತರಿಸಿದ ಮಮತಾ, ಸ್ಟಾರ್‌ಡಸ್ಟ್ ಜನರು ನನಗೆ ಡೆಮಿ ಮೂರ್ ಅವರ ಚಿತ್ರವನ್ನು ತೋರಿಸಿದ್ದರು. ಅದು ನನಗೆ ಅಶ್ಲೀಲವಾಗಿ ಕಾಣಲಿಲ್ಲ. ಆ ಸಮಯದಲ್ಲಿ ನಾನು ತುಂಬಾ ಮುಗ್ಧಳಾಗಿದ್ದೆ. ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದೆ ಎಂದು ಹೇಳಿದರು.

ನಾನು ಇನ್ನೂ ಕನ್ಯೆ ಎಂದು ಒಮ್ಮೆ ಹೇಳಿದ್ದೆ. ನನಗೆ ಸೆಕ್ಸ್ ಬಗ್ಗೆ ಏನೂ ತಿಳಿದಿರದ ಕಾರಣ ನ್ಯೂಡ್ ಫೋಟೋಶೂಟ್‌ಗಳ ಬಗ್ಗೆಯೂ ನನಗೆ ಹೆಚ್ಚು ತಿಳಿದಿರಲಿಲ್ಲ. ಕಳೆದ 23 ವರ್ಷಗಳಲ್ಲಿ ನಾನು ಯಾವುದೇ ವಯಸ್ಕರ ವಿಡಿಯೋವನ್ನು ವೀಕ್ಷಿಸಿಲ್ಲ. ನಾನು ಸೆಮಿ ನ್ಯೂಡ್ ಫೋಟೋಶೂಟ್ ಮಾಡಿದಾಗ ಅದರ ಬಗ್ಗೆ ಗೊತ್ತೇ ಇರಲಿಲ್ಲ ಎಂದರು. ನೀವು ಲೈಂಗಿಕತೆಯ ಬಗ್ಗೆ ತಿಳಿದಿರದ ಹೊರತು ನೀವು ಯಾವುದೇ ತಪ್ಪನ್ನು ಅನುಭವಿಸುವುದಿಲ್ಲ. ಅದಕ್ಕೇ ನನಗೆ ನ್ಯೂಡ್ ಫೋಟೋಶೂಟ್ ಬಗ್ಗೆ ಏನೂ ಗೊತ್ತಿರಲಿಲ್ಲ. 23 ವರ್ಷಗಳಿಂದ ನಾನು ಯಾವುದೇ ಅಶ್ಲೀಲ ಚಿತ್ರ ಅಥವಾ ಪೋರ್ನ್ ವಿಡಿಯೋ ನೋಡಿಲ್ಲ ಎಂದರೆ ನೀವು ನಂಬುತ್ತೀರಾ ಎಂದು ಕೇಳಿದರು.

ಇದೇ ಸಮಯದಲ್ಲಿ ಮಮತಾ ಅವರಿಗೆ ಸಿನಿಮಾಗಳಲ್ಲಿ ಅಶ್ಲೀಲ ಹಾಡುಗಳಲ್ಲಿ ನೃತ್ಯ ಮಾಡುತ್ತಿದ್ದೀರಾ ಎಂದು ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ನಟಿ ನೀವು ಮಾಧುರಿ ದೀಕ್ಷಿತ್ ಅಥವಾ ಯಾವುದೇ ಡ್ಯಾನ್ಸರ್​ಗೆ ಈ ಪ್ರಶ್ನೆ ಕೇಳಿ, ನಾವು ನೃತ್ಯದ ಹೆಜ್ಜೆಗಳ ಮೇಲೆ ಮಾತ್ರ ಗಮನಹರಿಸುತ್ತೇವೆ ಹೊರತು ಅದರಲ್ಲಿರುವ ಸಂಭಾಷಣೆ ಮತ್ತು ಅದರ ಅರ್ಥದ ಬಗ್ಗೆ ಎಲ್ಲ ಎಂದು ಹೇಳಿದರು.(ಏಜೆನ್ಸೀಸ್​​)