Controversy: ಮಾಜಿ ಚಲಚಿತ್ರ ನಟಿ ಮಮತಾ ಕುಲಕರ್ಣಿ ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಯಲಿದ್ದಾರೆ. ಹೌದು, ಕೆಲ ದಿನಗಳಿಂದೆ ಕಿನ್ನಾರ ಅಖಾರದ ಮಹಾಮಂಡಲೇಶ್ವರನ್ನಾಗಿ ಈಕೆಯನ್ನು ನೇಮಿಸಲಾಯಿತ್ತು. ಆದರೆ, ಕೆಲವರ ವಿರೋಧದ ಬೆನ್ನಲ್ಲೇ ಆ ಸ್ಥಾನದಿಂದ ಮಮತಾರನ್ನು ವಜಾಗೊಳಿಸಲಾಯಿತು. ಇದೀಗ ತನನ್ನು ವಿರೋಧ ಮಾಡಿವರಿಗೆ ತನ್ನದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.
ಭಾಗೇಶ್ವರ್ ಧಾಮದ ಬಾಬಾ ಪಂಡಿತ್ ಧೀರೇಂದ್ರ ಶಾಸ್ತ್ರಿ ಮತ್ತು ಬಾಬಾ ರಾಮ್‌ದೇವ್ ಸೇರಿದಂತೆ ಅನೇಕ ಖುಷಿಗಳು ಕಿನ್ನಾರ ಅಖಾರದ ಮಹಾಮಂಡಲೇಶ್ವರನ್ನಾಗಿ ಮಮತಾ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಬಾಬಾ ಪಂಡಿತ್ ಧೀರೇಂದ್ರ ಶಾಸ್ತ್ರಿ ಮತ್ತು ಬಾಬಾ ರಾಮ್‌ದೇವ್ ಬಗ್ಗೆ ಮಾತನಾಡಿರುವ ಮಮತಾ ಕುಲಕರ್ಣಿ ವಿರೋಧಕ್ಕೆ ಉತ್ತರ ನೀಡಿದ್ದಾರೆ.
ಇದನ್ನೂ ಓದಿ:ಅಭಿಷೇಕ್ ಶರ್ಮಾರ ಸ್ಫೋಟಕ ಶತಕ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಭಾರತ ರೋಚಕ ಜಯ | India Thrilling win
ಇತ್ತೀಚೆಗೆ, ಅವರು ಇಂಡಿಯಾ ಟಿವಿಯ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಈ ವಿವಾದಕ್ಕೆ ಸಂಬಂಧಿಸಿದ ಕೆಲ ಪ್ರಶ್ನೆಗಳನ್ನು ಕೇಳಲಾಯಿತು. ಬಾಬಾ ರಾಮ್‌ದೇವ್ ಅವರ ವಿರೋಧದ ಕುರಿತು ಕೇಳಿದ ಪ್ರಶ್ನೆಗೆ ಮಮತಾ ಕುಲಕರ್ಣಿ, “ನಾನು ಈಗ ಬಾಬಾ ರಾಮ್‌ದೇವ್‌ಗೆ ಏನು ಹೇಳಬೇಕು? ಅವರು ಮಹಾಕಾಲ್ ಮತ್ತು ಮಹಾಕಾಳಿಗಳಿಗೆ ಭಯಪಡಬೇಕು. ನಾನು ಅವರನ್ನು ಅವರಿಗೆ ಬಿಡುತ್ತೇನೆ ಎಂದರು.
''ನಾನು 25 ವರ್ಷ ವಯಸ್ಸಿನವನಾಗಿದ್ದಷ್ಟು ತಪಸ್ಸು ಮಾಡಿದ್ದೇನೆ. ಧೀರೇಂದ್ರ ಶಾಸ್ತ್ರಿಗಳಿಗೆ ಅವರ ಗುರುಗಳಾದ ರಾಮಭದ್ರಾಚಾರ್ಯರಿಗೆ ದಿವ್ಯದೃಷ್ಟಿ ಇದೆ ಎಂದು ಹೇಳಬಯಸುತ್ತೇನೆ, ನಾನು ಯಾರೆಂದು ಅವರನ್ನು ಕೇಳಿ ಸುಮ್ಮನೆ ಕುಳಿತುಕೊಳ್ಳುತ್ತೇನೆ” ಎಂದು ಹೇಳಿದರು.(ಏಜೆನ್ಸೀಸ್)