Mamata Banerjee 
ನ್ಯೂಸ್

'ದೀದಿ ಹೇರುತ್ತಿರುವ ಲಾಕ್​ಡೌನ್​​ಗೆ ಕಾರಣ ಬಿಜೆಪಿಯೇ ಹೊರತು ಕರೊನಾ ಅಲ್ಲ...'

lakshmihegde

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ರ‍್ಯಾಲಿ ನಡೆಸಲು ಅವಕಾಶ ಕೊಡಬಾರದು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲಾಕ್​ಡೌನ್​ ಹೇರುತ್ತಿದ್ದಾರೆ ಎಂದು ರಾಜ್ಯದ ಬಿಜೆಪಿ ಅಧ್ಯಕ್ಷ ದಿಲೀಪ್​ ಘೋಷ್​ ಆರೋಪಿಸಿದ್ದಾರೆ.

ಕರೊನಾ ಇಲ್ಲಿ ನಾಶವಾಗಿದೆ. ಆದರೂ ದೀದಿ ನಾಟಕ ಮಾಡುತ್ತಿದ್ದಾರೆ. ಬಿಜೆಪಿಗೆ ಯಾವುದೇ ಸಭೆ, ರ‍್ಯಾಲಿ ಆಯೋಜಿಸಲು ಬಿಡಬಾರದು ಎಂಬ ಒಂದೇ ಕಾರಣಕ್ಕೆ ಈ ಲಾಕ್​ಡೌನ್​ ಹೇರುತ್ತಿದ್ದಾರೆ ಎಂದು ನಿನ್ನೆ ಹೂಗ್ಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.  ಇದನ್ನೂ ಓದಿ: ಮಕ್ಕಳ ಎದುರೇ ಮಹಿಳೆಯನ್ನು ರೇಪ್​​ ಮಾಡಿದ ದುರುಳರು; ಅವಳ್ಯಾಕೆ ಹೋಗಬೇಕಿತ್ತು ಎಂದ ಪೊಲೀಸ್​ ಮುಖ್ಯಸ್ಥ

ದಿಲೀಪ್​ ಘೋಷ್​ ಮಾತನಾಡಿದ ವಿಡಿಯೋ ಕ್ಲಿಪ್​ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಪಶ್ಚಿಮಬಂಗಾಳದಲ್ಲಿ ಬಿಜೆಪಿಗೆ ಬೆಂಬಲಿಗರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಿದ ಮೇಲೆ ಮಮತಾ ಬ್ಯಾನರ್ಜಿ ಮತ್ತು ಅವರ ಬೆಂಬಲಿಗರು, ಸೋದರ ಸಂಬಂಧಿಗಳು ಅಸ್ವಸ್ಥರಾಗಿದ್ದಾರೆ. ಆದರೆ ತಾವೆಲ್ಲ ಕರೊನಾ ವೈರಸ್​ನಿಂದ ಭಯಗೊಂಡಿದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್​)