ನ್ಯೂಸ್

ಮಲೈಕಾ ಅರೋರ ವಾಸವಿದ್ದ ಕಟ್ಟಡವೇ ಸೀಲ್​ಡೌನ್​!; ಕಂಟೇನ್ಮೆಂಟ್​ ಝೋನ್​ ಆಯ್ತು ಇಡೀ ಏರಿಯಾ ...

ಬಾಲಿವುಡ್​ ಮಂದಿಗೆ ಕರೊನಾ ವೈರಸ್​ ಕಾಟ ಹೆಚ್ಚಾಗುತ್ತಿದೆ. ಎಷ್ಟೇ ಕಾಳಜಿ ವಹಿಸಿದರೂ, ಒಂದಲ್ಲ ಒಂದು ರೀತಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಇದೀಗ ಬಾಲಿವುಡ್​ನ ಹಾಟ್​ ಬ್ಯೂಟಿ, ಅರ್ಜುನ್​ ಕಪೂರ್​ ಪ್ರೇಯಸಿ ಮಲೈಕಾ ಅರೋರ, ಕರೊನಾಕ್ಕೆ ಬೆಚ್ಚಿಬಿದ್ದಿದ್ದಾರೆ. ತಾವು ವಾಸವಿದ್ದ ಕಟ್ಟಡದಲ್ಲಿಯೇ ವ್ಯಕ್ತಿಯೊಬ್ಬರಲ್ಲಿ ಕರೊನಾ ಪಾಸಿಟಿವ್​ ವರದಿ ದೃಢವಾಗಿದೆ!

ಹೌದು, ಲಾಕ್​ಡೌನ್​ ಘೋಷಣೆ ಆದಾಗಿನಿಂದ ಪುತ್ರ ಅರ್ಹಾನ್​ ಜತೆಗೆ ಸೆಲ್ಫ್​ ಐಸೋಲೇಷನ್​ನಲ್ಲಿರುವ ಮಲೈಕಾ, ಬಾಂದ್ರಾದ ಕಟ್ಟಡದಲ್ಲಿ ವಾಸವಾಗಿದ್ದಾರೆ. ಆ ಬಿಲ್ಡಿಂಗ್​ನಲ್ಲಿ ವಾಸವಿರುವ ವ್ಯಕ್ತಿಗೆ ಕೋವಿಡ್​ ವರದಿ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ, ಇಡೀ ಕಟ್ಟಡವನ್ನು ಸೀಲ್​ಡೌನ್​ ಮಾಡಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಬಾಂದ್ರಾಕ್ಕೆ ಸುತ್ತಮುತ್ತ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಮುಚ್ಚಲಾಗಿದ್ದು, ಇಡೀ ಏರಿಯಾವನ್ನು ನಿಷೇಧಿತ ಪ್ರದೇಶವೆಂದು ಬಾಂಬೆ ಮುನ್ಸಿಪಲ್​ ಕಾರ್ಪೋರೇಷನ್​ ಘೋಷಿಸಿದೆ.

ಇತ್ತೀಚೆಗಷ್ಟೇ ಬಾಲಿವುಡ್​ ಫಿಲಂ ಮೇಕರ್​ ಕರಣ್​ ಜೋಹಾರ್​ ಮನೆಯ ಕೆಲಸಗಾರರಲ್ಲಿಯೂ ಕರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಕಟ್ಟಡವನ್ನು ಸೀಲ್​ ಮಾಡಲಾಗಿತ್ತು. ಅದಕ್ಕೂ ಮೊದಲು ಬೋನಿ ಕಪೂರ್​ ಮತ್ತು ವಿಕ್ಕಿ ಕೌಶಲ್​ ವಾಸವಿದ್ದ ಕಟ್ಟಡವನ್ನೂ ಸೀಲ್​ಡೌನ್​ ಮಾಡಿ, ಸ್ಯಾನಿಟೈಸ್​ ಮಾಡಲಾಗಿತ್ತು.

ಸದ್ಯ ಇಡೀ ಮಹಾರಾಷ್ಟ್ರ ಕರೊನಾ ಪ್ರಕರಣಗಳಿಂದ ತುಂಬಿ ಹೋಗಿದೆ. ಅದರಲ್ಲೂ ಮುಂಬೈವೊಂದರಲ್ಲಿಯೇ 10 ಸಾವಿರ ಗಡಿ ಮುಟ್ಟಿದೆ. ಹಾಗಾಗಿ ಬಿಎಂಸಿ ಸಹ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುತ್ತಿದೆ. (ಏಜೆನ್ಸೀಸ್​)